ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಟಿ-20ಗೆ ಗುಡ್ ಬೈ?
ಇತ್ತೀಚಿಗೆ ಟಿ-20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ವಿಶ್ವಕಪ್ ನಂತರ ಟಿ-20ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಾಗಿರುವುದಾಗಿ ಮೂಲಗಳು ಹೇಳಿವೆ.

ನವದೆಹಲಿ: ಇತ್ತೀಚಿಗೆ ಟಿ-20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ವಿಶ್ವಕಪ್ ನಂತರ ಟಿ-20ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಾಗಿರುವುದಾಗಿ ಮೂಲಗಳು ಹೇಳಿವೆ.
ಕೊಯ್ಲಿ ಅವರಿಂದ 150 ರ ಸ್ಟ್ರೈಕ್ ದರದಲ್ಲಿ ರನ್ ಬರುತ್ತಿಲ್ಲ. ಭಾನುವಾರ ನಡೆದ ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ರನ್ ಗಳಿಸಲು ಪರದಾಡಿದರು. ಆದರೆ, ನಂತರ 30 ಎಸತೆಗಳಲ್ಲಿ 35 ರನ್ ಗಳಿಸಿದರು. ಆದರಿಂದ ಕೊಹ್ಲಿ ಅವರನ್ನು ಟಿ-20 ವಿಶ್ವಕಪ್ ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ? ಆದರೆ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಬಳಿಕ ಟಿ-20ಯಲ್ಲಿ ಭಾರತ ಪರ ಕೊಹ್ಲಿ ಆಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಆಯ್ಕೆದಾರರಿಗೆ ಮಾತ್ರ ಉತ್ತರ ಗೊತ್ತಿರುತ್ತದೆ. ಆದರೆ, ಅವರು ಈ ಬಗ್ಗೆ ಏನನ್ನು ಮಾತನಾಡುತ್ತಿಲ್ಲ.
33 ವರ್ಷದ ಕೊಹ್ಲಿ 464 ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್ ನನ್ನು 15 ಸೀಸನ್ ಗಳಲ್ಲಿ ಆಡಿದ್ದಾರೆ. ಈ ವರ್ಷ ನಡೆದ ಐದು ಟಿ-20 ಪಂದ್ಯಗಳಲ್ಲಿ ಕ್ರಮವಾಗಿ 17, 52, 1,11 ಮತ್ತು 35 ರನ್ ಗಳನ್ನು ಕೊಹ್ಲಿ ಗಳಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಅರ್ಧ ಶತಕ ಗಳಿಸುವ ಅಗತ್ಯವಿಲ್ಲ, ಆದರೆ, 20-22 ಎಸೆತಗಳಲ್ಲಿ 35, ಅಥವಾ 10 ಎಸೆತಗಳಲ್ಲಿ 20 ರನ್ ಆದರೂ ಗಳಿಸಬೇಕಾಗುತ್ತದೆ. ಇದು ಸ್ವಲ್ಪ ಮಟ್ಟದ ಪರಿಣಾಮವನ್ನಾದರೂ ಬೀರುತ್ತದೆ.
ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಯ ನಂ.3 ಕ್ರಮಾಂಕದ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ ಬಿಸಿಸಿಐ ಟಿ 20 ವಿಶ್ವಕಪ್‌ನ ಕೊನೆಯವರೆಗೂ ಈ ಸಮಸ್ಯೆ ಪರಿಹರಿಸುವುದಿಲ್ಲ ಎಂದು ತಿಳಿದುಬಂದಿದೆ. ಕೊಹ್ಲಿ ಅವರನ್ನು ಟಿ-20 ತಂಡದಿಂದ ಕೈ ಬಿಡುವ ಬಗ್ಗೆ ರಾಷ್ಟ್ರೀಯ ಆಯ್ಕೆದಾರರ ತಂಡ ಕೋಚ್ ರಾಹುಲ್ ದ್ರಾವಿಡ್, ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


