ಎಲ್ಲಾ ಫಾರ್ಮ್ಯಾಟ್ ಗಳಲ್ಲಿಯೂ 100 ಪಂದ್ಯಗಳನ್ನಾಡಿದ ಏಕೈಕ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರ
ಆ.28 ರಂದು ದುಬೈ ನಲ್ಲಿ ಭಾರತ- ಪಾಕಿಸ್ತಾನ ತಂಡಗಳು ಏಷ್ಯಾ ಕಪ್-2022 ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ಇದು 100 ನೇ ಪಂದ್ಯವಾಗಿರಲಿದೆ.

ಅಬುಧಾಬಿ: ಆ.28 ರಂದು ದುಬೈ ನಲ್ಲಿ ಭಾರತ- ಪಾಕಿಸ್ತಾನ ತಂಡಗಳು ಏಷ್ಯಾ ಕಪ್-2022 ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ಇದು 100 ನೇ ಪಂದ್ಯವಾಗಿರಲಿದೆ.
ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಎಲ್ಲಾ 3 ಫಾರ್ಮ್ಯಾಟ್ ಗಳಲ್ಲೂ 100 ಪಂದ್ಯಗಳನ್ನು ಪೂರೈಸಿದ ಏಕೈಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
2008 ರಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಪ್ರಾರಂಭಿಸಿದರು. ಈ ವರೆಗಿನ 99 ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 3,308 ಪಂದ್ಯಗಳನ್ನಾಡಿದ್ದು, ಸರಾಸರಿ 50.12 ಹೊಂದಿದ್ದಾರೆ. ಟಿ20ಯಲ್ಲಿ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಉತ್ತಮ ಸ್ಕೋರ್ 94 ಆಗಿದ್ದು, 30 ಅರ್ಧಶತಕಗಳನ್ನು ಪೂರೈಸಿದ್ದಾರೆ.
2017-2021 ರ ನಡುವೆ 50 ಪಂದ್ಯಗಳನ್ನು ನಾಯಕನಾಗಿ ಮುನ್ನಡೆಸಿರುವ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲುತ್ತದೆ ಹಾಗೂ ಈ 50 ಪಂದ್ಯಗಳ ಪೈಕಿ 30 ಪಂದ್ಯಗಳನ್ನು ಗೆದ್ದಿದ್ದು 16 ಪಂದ್ಯಗಳನ್ನು ಸೋತಿದ್ದರೆ ಎರಡು ಪಂದ್ಯಗಳಲ್ಲಿ ಎದುರಾಳಿ ತಂಡದೊಂದಿಗೆ ಸಮಬಲ ಸಾಧಿಸಲಾಗಿತ್ತು. ಈ ಫಾರ್ಮೆಟ್ ನಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ಶೇ.64.58 ರಷ್ಟು ಸರಾಸರಿ ಯಶಸ್ಸು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


