ಕ್ರಿಕೆಟ್

ಟಿ-20 ವಿಶ್ವಕಪ್: ಬಾಂಗ್ಲಾದೇಶದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ನೇಮಕ

ಮುಂಬರುವ ಏಷ್ಯಾಕಪ್ ಹಾಗೂ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.

ಟಿ-20 ವಿಶ್ವಕಪ್: ಬಾಂಗ್ಲಾದೇಶದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ನೇಮಕ
ಶ್ರೀಧರನ್ ಶ್ರೀರಾಮ್
Published On :

ಢಾಕಾ: ಮುಂಬರುವ ಏಷ್ಯಾಕಪ್ ಹಾಗೂ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.

ಶ್ರೀರಾಮ್ ಅವರನ್ನು ನೇಮಕ ಮಾಡಿರುವುದನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕೊಬ್ಬರು ಖಚಿತಪಡಿಸಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ವಿಶ್ವಕಪ್ ವರೆಗೂ ಶ್ರೀರಾಮ್ ಅವರನ್ನು ಆಯ್ಕೆ ಮಾಡಿದ್ದೇವೆ. ಹೊಸ ಮನಸ್ಥಿತಿಯೊಂದಿಗೆ ನಾವು ಮುಂದುವರೆಯಲಿದ್ದು, ಏಷ್ಯಾ ಕಪ್ ನಿಂದ ನೂತನ ತರಬೇತುದಾರರನ್ನು ಕಾಣಬಹುದು. ಟಿ-20 ವಿಶ್ವಕಪ್ ಪ್ರಮುಖ ಗುರಿಯಾಗಿದೆ. ಹೊಸ ತರಬೇತುದಾರ ಏಷ್ಯಾ ಕಪ್‌ನಿಂದ ನೇಮಕಗೊಳ್ಳದಿದ್ದರೆ ಹೊಂದಿಕೊಳ್ಳಲು ಸಮಯ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಶ್ರೀರಾಮ್ 2000 ಮತ್ತು 2004 ರ ನಡುವೆ ಎಂಟು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಆಸ್ಟ್ರೇಲಿಯಾದ ಸಹಾಯಕ ಮತ್ತು ಸ್ಪಿನ್-ಬೌಲಿಂಗ್ ತರಬೇತುದಾರರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.ಆಸ್ಟ್ರೇಲಿಯಾದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಅಡಿಯಲ್ಲಿ, 2016 ರಲ್ಲಿ ಶ್ರೀರಾಮ್ ಅವರಿಗೆ ಸ್ಪಿನ್ ಬೌಲಿಂಗ್ ಕೋಚ್ ಜವಾಬ್ದಾರಿ ವಹಿಸಲಾಗಿತ್ತು.

 46 ವರ್ಷದ ಶ್ರೀಧರನ್ ಶ್ರೀರಾಮ್ ಇತ್ತೀಚಿಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್  ಹುದ್ದೆಯಿಂದ ಕೆಳಗಿಳಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.