ಐಪಿಎಲ್ 2021: ಮುಂಬೈ ಮಣಿಸಿದ್ದು ತಂಡದ ಮನೋಬಲ ಹೆಚ್ಚಿಸಿದೆ- ಮಾರ್ಗನ್
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸಿಕ್ಕ ಗೆಲುವು ಮನೋಬಲವನ್ನು ವೃದ್ಧಿಸಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಅಬುಧಾಬಿ: ಹಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸಿಕ್ಕ ಗೆಲುವು ಮನೋಬಲವನ್ನು ವೃದ್ಧಿಸಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ಪಂದ್ಯ ಗೆದ್ದ ಬಳಿಕ ಮಾತನಾಡಿದ ಅವರು, ಹಲವು ದಿನಗಳ ಬಳಿಕ ತಂಡ ಈ ರೀತಿ ಪ್ರದರ್ಶನ ನೀಡಿದ್ದು ನಿಜಕ್ಕೂ ತುಂಬ ಸಂತಸ ತಂದಿದೆ. ಸತತ ಎರಡು ಆವೃತ್ತಿಗಳಲ್ಲಿ ನಾವು ಈ ಲಯವನ್ನು ಕಂಡು ಕೊಳ್ಳಲು ಹುಡುಕಾಟ ನಡೆಸಿದ್ದೇವು. ಅದು ಈ ಬಾರಿ ಕೈ ಹಿಡಿದಿದೆ ಎಂದರು.
ವೆಂಕಟೇಶ್ ಅಯ್ಯರ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದು, ಹಾಗೂ ಯುವ ಆಟಗಾರ ಆಡಿದ ರೀತಿ ಖುಷಿ ನೀಡಿದೆ. ನಮ್ಮ ತಂಡದಲ್ಲಿ ಹಲವು ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಅಭ್ಯಾಸ ಪಂದ್ಯದಲ್ಲಿ ಅಯ್ಯರ್ ಆಟ ನಮ್ಮನ್ನು ಆಕರ್ಷಿಸಿತ್ತು. ತಮ್ಮ ಎರಡನೇ ಪಂದ್ಯದಲ್ಲಿ ಅವರು ತೋರಿದ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾದದ್ದು” ಎಂದು ಮಾರ್ಗನ್ ಹೇಳಿದರು.
14ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 15.1 ಓವರ್ ಗಳಲ್ಲಿ 3 ವಿಕೆಟ್ ಗೆ 159 ರನ್ ಸೇರಿಸಿ ಜಯ ಸಾಧಿಸಿ, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


