ಟಿ20 ವಿಶ್ವಕಪ್: ಭಾರತೀಯ ಕ್ರಿಕೆಟ್ ಆಟಗಾರರ ಬೀಚ್ ವಾಲಿಬಾಲ್ ಮಸ್ತಿ: ಸಾಥ್ ನೀಡಿದ ಧೋನಿ
ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ.

ದುಬೈ: ದುಬೈನ ಬೀಚ್ ನಲ್ಲಿ ಧೋನಿ ಹುಡುಗರು ವಾಲಿಬಾಲ್ ಆಡೋದರ ಮೂಲಕ ಕಸರತ್ತು ನಡೆಸಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮಾಡು ಇಲ್ಲವೇ ಮಡಿ ಪಂದ್ಯ ಆರಂಭವಾಗಲಿದೆ.
ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ. ಎರಡು ಟೀಮ್ ಗಳನ್ನಾಗಿ ವಿಭಜಿಸಿ ಪಂದ್ಯ ಆಡಿ ಆನಂದಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಚಹಾರ್ ದುಬೈ ಬೀಚ್ ನಲ್ಲಿ ಶಾರ್ಟ್ಸ್ ಧರಿಸಿ ಉತ್ಸಾಹದಿಂದ ಆಟದಲ್ಲಿ ಪಾಲ್ಗೊಂಡರು. ತಂಡದ ಮೆಂಟರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಉಳಿದವರು ಕೂಡಾಾತದಲ್ಲಿ ಭಾಗಿಯಾಗಿದ್ದು ವಿಶೇಷ.
Related Article
ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್!
'ಓವರ್ ಸ್ಮಾರ್ಟ್ ಬೇಡ' ಲೈವ್ ಟಿವಿ ಶೋನಲ್ಲಿ ಶೋಯೆಬ್ ಅಖ್ತರ್ ಗೆ 'ಗೆಟ್ ಔಟ್' ಎಂದ ನಿರೂಪಕ; ವಿಡಿಯೋ ವೈರಲ್!
ಹಿಂದೂಗಳ ನಡುವೆ ನಮಾಜ್: ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್
ಐಪಿಎಲ್ ತಂಡಗಳ ಹರಾಜು: ಬಿಸಿಸಿಐ ಬೊಕ್ಕಸಕ್ಕೆ 12,700 ಕೋಟಿ ರೂ..; ಏನಿದು ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆ!
ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


