ಕ್ರಿಕೆಟ್

ಸೋಲು ಮರೆತು IND-NZ ಪಂದ್ಯಕ್ಕೆ ಟೀಮ್ ಇಂಡಿಯಾ ತಂಡವನ್ನು ಹುರಿದುಂಬಿಸಿದ ಫ್ಯಾನ್ಸ್!

ಪಾಕಿಸ್ತಾನದ ಎದುರು ಭಾರತ ಮೊದಲ ಸೋಲು ಅನುಭವಿಸಿತ್ತು. ಇದು ಕ್ರಿಕೆಟ್ ಪ್ರಿಯರಿಗೆ ಭಾರಿ ನೋವುಂಟಾಗಿತ್ತು. ಈಗ ಅದರಿಂದ ಚೇತರಿಸಿಕೊಂಡಿದ್ದು #ಮತ್ತೆಘರ್ಜಿಸಿ ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಭಾರತ ತಂಡವನ್ನು ಹುರಿದುಂಬಿಸಿದ್ದಾರೆ.

ಸೋಲು ಮರೆತು IND-NZ ಪಂದ್ಯಕ್ಕೆ ಟೀಮ್ ಇಂಡಿಯಾ ತಂಡವನ್ನು ಹುರಿದುಂಬಿಸಿದ ಫ್ಯಾನ್ಸ್!
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ
Published On :

ಬೆಂಗಳೂರು: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಾಕಿಸ್ತಾನದ ಎದುರು ಭಾರತ ಮೊದಲ ಸೋಲು ಅನುಭವಿಸಿತ್ತು. ಇದು ಕ್ರಿಕೆಟ್ ಪ್ರಿಯರಿಗೆ ಭಾರಿ ನೋವುಂಟಾಗಿತ್ತು. ಈಗ ಅದರಿಂದ ಚೇತರಿಸಿಕೊಂಡಿದ್ದು #ಮತ್ತೆಘರ್ಜಿಸಿ ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಭಾರತ ತಂಡವನ್ನು ಹುರಿದುಂಬಿಸಿದ್ದಾರೆ. 

ಸಾಮಾಜಿಕ ಜಾಲತಾಣ 'ಕೂ' ನಲ್ಲಿ ಈ ಕುರಿತು ಕ್ರಿಕೆಟಿಗರು ಹಾಗು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದಾರೆ. 'ಭಾರತ ಮತ್ತಷ್ಟು ಗಟ್ಟಿಯಾಗಿ ಹೊರಮೊಮ್ಮಲಿದೆ' ಎಂದು ಕ್ರಿಕೆಟಿಗ ವ್ರಿದ್ಧಿಮಾನ್ ಸಾಹ ಅಭಿಪ್ರಾಯಪಟ್ಟಿದ್ದಾರೆ. 

'ಮತ್ತೊಮ್ಮೆ ನಿಮ್ಮ ಆರ್ಭಟವನ್ನು ತೋರಿಸಿ ಗಟ್ಟಿಯಾಗಿ #ಮತ್ತೆಘರ್ಜಿಸಿ ಆದ್ರೆ ಮೊನ್ನೆಯ ಸಪ್ಪೆಯಾದ ಘರ್ಜನೆ ಮಾತ್ರ ಮಾಡಬ್ಯಾಡ್ರಿ. ಹುಲಿಯ ಬೇಟೆ ತಪ್ಪಿದ ಮಾತ್ರಕ್ಕೆ ಉಪವಾಸ ಇರಲ್ಲ ಮತ್ತೊಂದು ದಿನ ಭರ್ಜರಿ ಬೇಟೆ ಇದ್ದೇ ಇರತ್ತೆ' ರಾಜನಂದಿನಿ  ಎನ್ನುವವರು ಕೂ ಮಾಡಿದ್ದಾರೆ. 

ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆಲುವು ಸಾಧಿಸುತ್ತದೆಯೇ ಎನ್ನುವ ಕ್ರಿಕೆಟ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಸಾಕಷ್ಟು ಮಂದಿ ಗೆಲುವು ಪಕ್ಕಾ ಎಂದು ಓಟ್ ಮಾಡಿದ್ದಾರೆ. 

'ಭಾರತ ತಂಡದಲ್ಲಿ ಯಾವುದೇ ಸಮಸ್ಯೆಯಿಲ್ಲ ತಂಡ ಸದೃಢವಾಗಿದೆ ಆದರೆ, ಮೊನ್ನೆಯ ಪಂದ್ಯ ಕೆಲವು ಚಿಕ್ಕಪುಟ್ಟ ತಪ್ಪುಗಳಿಂದ ಸೋತಿರಬಹುದು ಆದರೆ, ಪುನಃ ಭಾರತ ತಂಡ ಫೀನಿಕ್ಸ್ ನಂತೆ ಎದ್ದು ಬರಲಿದೆ ಎಂಬ ವಿಸ್ವಾಸವಿದೆ' ಎಂದು ಕಾರ್ತಿಕ್ ಎನ್ನುವವರು ಕೂ ಮಾಡಿದ್ದಾರೆ. 

Related Article

ಟಿ20 ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದ ಬಾಬರ್ ಆಜಂ ನಾಯಕತ್ವದ ಪಾಕ್ ತಂಡ

ಟಿ20 ವಿಶ್ವಕಪ್: ಭಾರತವನ್ನು ಮಣಿಸಿದ ಪಾಕ್, ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮ, ಶುಭ ಕೋರಿದ ಗಣ್ಯರು

ಟಿ20 ವಿಶ್ವಕಪ್: 10 ವಿಕೆಟ್ ಗಳ ಅಂತರದಲ್ಲಿ ಸೋತು ಹೀನಾಯ ದಾಖಲೆ ಬರೆದ ಭಾರತ

ಟಿ20 ವಿಶ್ವಕಪ್: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮರ್ಮಾಘಾತ, ಹಾರ್ದಿಕ್ ಪಾಂಡ್ಯಗೆ ಗಾಯ, ಆಸ್ಪತ್ರೆಗೆ ರವಾನೆ

ಟಿ20 ವಿಶ್ವಕಪ್: ಬಡಿದಾಡಿಕೊಳ್ಳುವ ಮಟ್ಟಕ್ಕೆ ಹೋದ ಲಂಕಾ-ಬಾಂಗ್ಲಾ ಆಟಗಾರರು, ವಿಡಿಯೋ ವೈರಲ್!

ಟಿ20 ವಿಶ್ವಕಪ್: ಭಾರತ-ಪಾಕ್ ಪಂದ್ಯ ನೋಡಲು ಹೋಗಿದ್ದ ಪಾಕ್ ಸಚಿವ ದಿಢೀರ್ ವಾಪಸ್ಸಾಗಿದ್ದೇಕೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.