ಕ್ರಿಕೆಟ್

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ತೂಗುಯ್ಯಾಲೆಯಲ್ಲಿ: ಕೇಂದ್ರದ ಅಂಗಳದಲ್ಲಿ ಚೆಂಡು

ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್ ಪಂದ್ಯಗಳು, 3 ಒಂದು ದಿನದ ಪಂದ್ಯಗಳು ಮತ್ತು 4 ಟಿ-20 ಪಂದ್ಯಗಳು ನಡೆಯಲಿದ್ದವು. ಆದರೆ ಹೊಸ ರೂಪಾಂತರಿ ಪತ್ತೆಯಾಗಿರುವುದರಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಆತಂಕ ಮನೆ ಮಾಡಿದೆ.

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ತೂಗುಯ್ಯಾಲೆಯಲ್ಲಿ: ಕೇಂದ್ರದ ಅಂಗಳದಲ್ಲಿ ಚೆಂಡು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಸೃಷ್ಟಿ ಮಾಡಿದೆ. ಹಾಂಗ್ ಕಾಂಗ್, ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ 50 ಸೋಂಕಿತ ಪ್ರಕರಣಗಳು ಕಂಡುಬಂದಿವೆ.

ಇಲ್ಲಿಯವರೆಗೆ ಭಾರತದಲ್ಲಿ ಈ ಹೊಸ ರೂಪಾಂತರಿಯ ಒಂದೂ ಪ್ರಕರಣ ಕಂಡುಬಂದಿಲ್ಲ. ಇದೆಲ್ಲದರ ನಡುವೆ ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತಿದೆ. ಬಿಸಿಸಿಐ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂಬುದರ ಸಲಹೆಗಾಗಿ ಕೇಂದ್ರಸರ್ಕಾರವನ್ನು ಎದುರುನೋಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಡಿಸೆಂಬರ್ 17 ರಿಂದ ಜನವರಿ 26 ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್, ಪ್ರಾಲ್, ಕೇಪ್ ಟೌನ್ ಮತ್ತು ಸೆಂಚುರಿಯನ್ ನಲ್ಲಿ ಒಟ್ಟು 10 ಪಂದ್ಯಗಳು ನಡೆಯಲಿವೆ. 

3 ಟೆಸ್ಟ್ ಪಂದ್ಯಗಳು, 3 ಒಂದು ದಿನದ ಪಂದ್ಯಗಳು ಮತ್ತು 4 ಟಿ-20 ಪಂದ್ಯಗಳು ನಡೆಯಲಿವೆ, ಆದರೆ ಹೊಸ ರೂಪಾಂತರಿ ಪತ್ತೆಯಾಗಿರುವುದರಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಆತಂಕ ಮನೆ ಮಾಡಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 10 ಪಂದ್ಯಗಳ ಪೈಕಿ 5 ಕೇಪ್ ಟೌನ್ ನಲ್ಲಿ 3 ಪಾರ್ಲ್‌ನಲ್ಲಿ ಮತ್ತು 1-1 ಪಂದ್ಯವನ್ನು ಜೋಹಾನ್ಸ್‌ಬರ್ಗ್ ಮತ್ತು ಸೆಂಚುರಿಯನ್‌ನಲ್ಲಿ ಆಡಬೇಕಾಗಿದೆ. 

ಜೋಹಾನ್ಸ್‌ಬರ್ಗ್ ಮತ್ತು ಸೆಂಚುರಿಯನ್ ನಗರಗಳು ಗೊಟೆಂಗ್ ಪ್ರಾಂತ್ಯದ ಅಡಿಯಲ್ಲಿ ಬರುತ್ತವೆ. ಪ್ರಸ್ತುತ ಹೊಸ ರೂಪಾಂತರಿ ಓಮಿಕ್ರಾನ್ ನಿಂದಾಗಿ ಈ ಪ್ರದೇಶಗಳು ಹೆಚ್ಚು ಪ್ರಭಾವಿತವಾಗಿವೆ.

Related Article

ಸ್ವದೇಶದಲ್ಲಿ ಕಾಣೆಯಾಗಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ವಿಡಿಯೊ ಕಾಲ್ ನಲ್ಲಿ ಪ್ರತ್ಯಕ್ಷ: ಖಾಸಗಿತನ ಗೌರವಿಸುವಂತೆ ಮನವಿ

ಭಾರತೀಯ ರೆಸ್ಲರ್ ನಿಶಾ ದಹಿಯಾ, ಆಕೆಯ ಸಹೋದರನ ಗುಂಡಿಕ್ಕಿ ಹತ್ಯೆ, ಆರೋಪಿ ಪರಾರಿ; ಹೆಸರಿನಿಂದ ಭಾರಿ ಗೊಂದಲ ಸೃಷ್ಟಿ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟ: 'ನೀರಜ್ ಚೋಪ್ರಾ' ಸೇರಿ 12 ಕ್ರೀಡಾಪಟುಗಳಿಗೆ 'ಖೇಲ್ ರತ್ನ' , ಶಿಖರ್ ಧವನ್ ಗೆ ಅರ್ಜುನ ಪ್ರಶಸ್ತಿ

ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ: ನೀರಜ್ ಚೋಪ್ರಾ, ಮಿಥಾಲಿ ರಾಜ್ ಸೇರಿ 11 ಕ್ರೀಡಾಪಟುಗಳ ಹೆಸರು ಶಿಫಾರಸು

ತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!

'ಮೋದಿ ಸರ್ವಾಧಿಕಾರಿಯಲ್ಲ' ಎಂಬ ಅಮಿತ್ ಶಾ ಹೇಳಿಕೆ ಒಂದು ಜೋಕ್: ಟೆನಿಸ್ ದಂತಕಥೆ ಮಾರ್ಟಿನಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.