ಕ್ರಿಕೆಟ್

ಕಾನ್ಪುರ ಟೆಸ್ಟ್: ಭಾರತದಲ್ಲಿ ದಾಖಲೆ ಬರೆದ ನ್ಯೂಜಿಲೆಂಡ್ ನ ಲಾಥಮ್-ಯಂಗ್ ಶತಕದ ಜೊತೆಯಾಟ

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿರುವ ವಿಲ್ ಯಂಗ್ ಮತ್ತು ಟಾಮ್ ಲಥಾಮ್ ದಾಖಲೆಗೆ ಪಾತ್ರರಾಗಿದ್ದಾರೆ.

ಕಾನ್ಪುರ ಟೆಸ್ಟ್: ಭಾರತದಲ್ಲಿ ದಾಖಲೆ ಬರೆದ ನ್ಯೂಜಿಲೆಂಡ್ ನ ಲಾಥಮ್-ಯಂಗ್ ಶತಕದ ಜೊತೆಯಾಟ
ಭಾರತ ವರ್ಸಸ್ ಕಿವೀಸ್
Published On :

ಕಾನ್ಪುರ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿರುವ ವಿಲ್ ಯಂಗ್ ಮತ್ತು ಟಾಮ್ ಲಥಾಮ್ ದಾಖಲೆಗೆ ಪಾತ್ರರಾಗಿದ್ದಾರೆ.

ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಜೋಡಿ 2ನೇ ದಿನದಾಟದ ಅಂತ್ಯಕ್ಕೆ 129ರನ್ ಗಳ ಅಜೇಯ ಜೊತೆಯಾಟವನ್ನಾಡಿದ್ದು, ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದೆ. ಆ ಮೂಲಕ ಈ ಜೋಡಿ ವಿಶೇಷ ದಾಖಲೆಯನ್ನು ನಿರ್ಮಿಸಿದ್ದು, ಭಾರತದಲ್ಲಿ ನ್ಯೂಜಿಲೆಂಡ್ ಪರ 3ನೇ ಅತ್ಯಧಿಕ ರನ್ ಗಳ ಜೊತೆಯಾಟವಾಡಿದೆ.

Story image

ಈ ಹಿಂದೆ 2003/04ರಲ್ಲಿ ಎಂ ರಿಚರ್ಡ್ಸನ್ ಮತ್ತು ಎಲ್ ವಿನ್ಸೆಂಟ್ ಜೋಡಿ ಮೊಹಾಲಿಯನ್ನಿ ನಡೆದ ಪಂದ್ಯದಲ್ಲಿ ಕಿವೀಸ್ ಪರ ದಾಖಲೆಯ ಗರಿಷ್ಠ 231ರನ್ ಗಳ ಜೊತೆಯಾಟವಾಡಿತ್ತು. ಇದು ಕಿವೀಸ್ ಪರ ಭಾರತದಲ್ಲಿ ಅತ್ಯಧಿಕ ಜೊತೆಯಾಟವಾಗಿದೆ. ಇದಕ್ಕೂ ಮೊದಲು 1999/2000ರಲ್ಲಿ ಅಹ್ಮದಾಬಾದ್ ಪಂದ್ಯದಲ್ಲಿ ಎಂ ಹಾರ್ನೆ-ಜಿ ಸ್ಟೆಡ್ ಜೋಡಿ 131 ರನ್ ಗಳ ಜೊತೆಯಾಟವಾಡಿತ್ತು. ಇದು 2ನೇ ಸ್ಥಾನದಲ್ಲಿದ್ದು, ಇದೀಗ ಲಾಥಮ್-ಯಂಗ್ ಜೋಡಿ ಈ ದಾಖಲೆಯನ್ನು ಹಿಂದಿಕ್ಕುವ ಹಂತದಲ್ಲಿದೆ. ಈ ಜೋಡಿ ನಾಳೆ ಕೇವಲ 2ರನ್ ಗಳಿಸಿದರೆ ಈ ದಾಖಲೆಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರುತ್ತದೆ.

ಪ್ರಸ್ತುತ 75ರನ್ ಗಳಿಸಿರುವ ವಿಲ್ ಯಂಗ್ ಮತ್ತು 50 ರನ್ ಕಲೆಹಾಕಿರುವ ಟಾಮ್ ಲಾಥಮ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.