ಕ್ರಿಕೆಟ್

ಟಿ20 ವಿಶ್ವಕಪ್: 85 ರನ್ ಗಳಿಗೆ ಆಲೌಟ್, ಭಾರತದ ವಿರುದ್ಧ ಸ್ಕಾಟ್ಲೆಂಡ್ ಹೀನಾಯ ದಾಖಲೆ

ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋಗಿ ಕೇವಲ 85 ರನ್ ಗಳಿಗೆ ಆಲೌಟ್ ಆದ ಸ್ಕಾಟ್ಲೆಂಡ್ ಹೀನಾಯ ದಾಖಲೆಯೊಂದನ್ನು ಬರೆದಿದೆ.

ಟಿ20 ವಿಶ್ವಕಪ್: 85 ರನ್ ಗಳಿಗೆ ಆಲೌಟ್, ಭಾರತದ ವಿರುದ್ಧ ಸ್ಕಾಟ್ಲೆಂಡ್ ಹೀನಾಯ ದಾಖಲೆ
ಸ್ಟಾಟ್ಲೆಂಡ್ ತಂಡ
Published On :

ದುಬೈ: ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋಗಿ ಕೇವಲ 85 ರನ್ ಗಳಿಗೆ ಆಲೌಟ್ ಆದ ಸ್ಕಾಟ್ಲೆಂಡ್ ಹೀನಾಯ ದಾಖಲೆಯೊಂದನ್ನು ಬರೆದಿದೆ.

Story image

ಹೌದು.. ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ 17.4 ಓವರ್ ನಲ್ಲಿ ಕೇವಲ 85ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ವಿರುದ್ಧ ಸ್ಕಾಟ್ಲೆಂಡ್ ಹೀನಾಯ ದಾಖಲೆ ಬರೆದಿದೆ.

ಟಿ20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ದಾಖಲಾದ 2ನೇ ಕನಿಷ್ಠ ರನ್ ಗಳಿಕೆ ಎಂಬ ಕುಖ್ಯಾತಿಗೆ ಸ್ಕಾಟ್ಲೆಂಡ್ ಪಾತ್ರವಾಗಿದೆ. ಈ ಹಿಂದೆ 2012ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೇವಲ 80ರನ್ ಗಳಿಸಿತ್ತು.

ಇದು ಭಾರತದ ವಿರುದ್ಧ ದಾಖಲಾದ ತಂಡವೊಂದರ ಕನಿಷ್ಛ ರನ್ ಗಳಿಕೆಯಾಗಿದೆ. 2ನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ಇದ್ದು, ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾವಿದೆ. ಆಸಿಸ್ ಪಡೆ 2014ರಲ್ಲಿ ಮೀರ್ ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ 86ರನ್ ಗಳಿಸಿತ್ತು. 

ಇದು ಭಾರತದ ವಿರುದ್ಧ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಮೂರನೇ ಕನಿಷ್ಠ ರನ್ ಗಳಿಕೆಯಾಗಿದೆ.

Story image

Related Article

ಟಿ20 ವಿಶ್ವಕಪ್: 'ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್', ಜಸ್ ಪ್ರೀತ್ ಬುಮ್ರಾ ಹಿರಿಮೆಗೆ ಮತ್ತೊಂದು ಗರಿ

ಟಿ20 ವಿಶ್ವಕಪ್: 18 ಎಸೆತಗಳಲ್ಲೇ 50 ರನ್, ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್!

ಟಿ20 ವಿಶ್ವಕಪ್: ಪವರ್ ಪ್ಲೇ ನಲ್ಲಿ ಗರಿಷ್ಠ ರನ್, ಟಿ20 ಕ್ರಿಕೆಟ್, ಟಿ20 ವಿಶ್ವಕಪ್ ನಲ್ಲಿ ದಾಖಲೆ ಬರೆದ ಭಾರತ

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತೀ ದೊಡ್ಡ ಗೆಲುವು!

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ, 'ಈ ಸಾಧನೆ ಮಾಡಿದ ವಿಶ್ವದ 3ನೇ ತಂಡ' ಭಾರತ, ಯಾವುದು ಆ ದಾಖಲೆ?

ಟಿ20 ವಿಶ್ವಕಪ್: ಸ್ಕಾಟ್ವೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಆಫ್ಘನ್, ನ್ಯೂಜಿಲೆಂಡ್ ಹಿಂದಿಕ್ಕಿದ ಟೀಂ ಇಂಡಿಯಾ

ಟಿ20 ವಿಶ್ವಕಪ್: 7.1 ಓವರ್ ನಲ್ಲಿ ಭಾರತ ಗೆದ್ದರೆ, ಆಫ್ಘನ್, ನ್ಯೂಜಿಲೆಂಡ್ ಅನ್ನು ಹಿಂದಿಕ್ಕಲಿದೆ!

ಟಿ20 ವಿಶ್ವಕಪ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್, 85 ರನ್ ಗಳಿಗೆ ಆಲೌಟ್

ವಿಚಿತ್ರ ದಾಖಲೆ ಬರೆದ ವಿರಾಟ್ ಕೊಹ್ಲಿ: 9 ಪಂದ್ಯಗಳಲ್ಲಿ 2 ಬಾರಿ ಟಾಸ್ ವಿನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.