ಕ್ರಿಕೆಟ್

ಧೋನಿ, ಕೊಹ್ಲಿ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಕ್ರಿಕೆಟಿಗ ಸೂರ್ಯಕುಮಾರ್, ಶಾಕ್ ಆದ ಅಭಿಮಾನಿಗಳು!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಒಂದೇ ಪದದಲ್ಲಿ ಉತ್ತರಿಸಿದ್ದಾರೆ.

ಧೋನಿ, ಕೊಹ್ಲಿ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಕ್ರಿಕೆಟಿಗ ಸೂರ್ಯಕುಮಾರ್, ಶಾಕ್ ಆದ ಅಭಿಮಾನಿಗಳು!
ಕೊಹ್ಲಿ-ಧೋನಿ
Published On :

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಒಂದೇ ಪದದಲ್ಲಿ ಉತ್ತರಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಅಭಿಮಾನಿಗಳು ನಿಮ್ಮ ಬೆಸ್ಟ್ ಇನ್ನಿಂಗ್ಸ್ ಯಾವುದು? ನಿಮ್ಮ ನೆಚ್ಚಿನ ಶಾಟ್ ಯಾವುದು? ಧೋನಿ ಮತ್ತು ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ ಎಂದು ಕೇಳಿದ್ದಕ್ಕೆ ಸೂರ್ಯಕುಮಾರ್ ಧೋನಿ ಎಂದರೆ ಲೆಜೆಂಡ್ ಮತ್ತು ಕೊಹ್ಲಿ ಎಂದರೆ ಸ್ಫೂರ್ತಿ ಎಂದು ತಿಳಿಸಿದ್ದಾರೆ. 

ಇನ್ನು ನನ್ನ ಜೀವನದ ಬೆಸ್ಟ್ ಇನ್ನಿಂಗ್ಸ್ ಅಂದರೆ ಅದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವುದು ಎಂದು ಉತ್ತರಿಸಿದ್ದಾರೆ. 

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಸೂರ್ಯಕುಮಾರ್ 3 ಪಂದ್ಯಗಳಿಂದ 89 ರನ್ ಸಿಡಿಸಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ಪರ ಆಡುವ ಸಾಧ್ಯತೆಯಿದೆ. ಕಾರಣ ಹಿರಿಯ ಆಟಗಾರರು ಡಬ್ಲ್ಯುಟಿಸಿ ಫೈನಲ್ಸ್ ಮತ್ತು ಜೋ ರೂಟ್ ವಿರುದ್ಧ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.