ಕ್ರಿಕೆಟ್

ಭಾರತದಲ್ಲಿ ಕೊರೋನಾ ವೈರಸ್ ರುದ್ರ ನರ್ತನ; ಭಾವುಕ ಪತ್ರ ಬರೆದ ಆಸಿಸ್ ಕ್ರಿಕೆಟ್ ದೈತ್ಯ ಹೇಡನ್

ಭಾರತದಲ್ಲಿ ಮಾರಕ ಕೊರೋನಾ ಅಟ್ಟಹಾಸ ಮಿತಿಮೀರಿರುವಂತೆಯೇ ಇತ್ತ ಭಾರತದ ಪರಿಸ್ಥಿತಿಗೆ ಹಲವು ಆಸಿಸ್ ಕ್ರಿಕೆಟಿಗರು ಮರುಗುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಆಸಿಸ್ ಕ್ರಿಕೆಟ್ ದೈತ್ಯ ಹೇಡನ್ ಸೇರ್ಪಡೆಯಾಗಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ರುದ್ರ ನರ್ತನ; ಭಾವುಕ ಪತ್ರ ಬರೆದ ಆಸಿಸ್ ಕ್ರಿಕೆಟ್ ದೈತ್ಯ ಹೇಡನ್
ಮ್ಯಾಥ್ಯೂ ಹೇಡನ್
Published On :

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ಅಟ್ಟಹಾಸ ಮಿತಿಮೀರಿರುವಂತೆಯೇ ಇತ್ತ ಭಾರತದ ಪರಿಸ್ಥಿತಿಗೆ ಹಲವು ಆಸಿಸ್ ಕ್ರಿಕೆಟಿಗರು ಮರುಗುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಆಸಿಸ್ ಕ್ರಿಕೆಟ್ ದೈತ್ಯ ಹೇಡನ್ ಸೇರ್ಪಡೆಯಾಗಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದ್ದು, ನಿತ್ಯ ಸರಾಸರಿ 3ಲಕ್ಷಕ್ಕಿಂತ ಹೆಚ್ಚಿನ ಕೊವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಬೆಡ್ ಗಳು ಸಿಗದೆ ಒಂದೆಡೆ ಜನ ಸಾಯುತ್ತಿದ್ದರೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದೆ ಜನ ಸಾಯುತ್ತಿದ್ದಾರೆ. ಭಾರತದ ಈ ಸಂಕಷ್ಟ  ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಅನೇಕ ವಲಯಗಳ ಗಣ್ಯರು ಭಾರತ ಪರಿಸ್ಥಿತಿಗೆ ನೆರವಾಗುವಂತೆ ಕೋರಿದ್ದರು. 

ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾರತದ ಕುರಿತು ಭಾವುಕ ಪತ್ರವೊಂದನ್ನು ಬರೆದಿದ್ದು, ಈ ಪತ್ರ ಇದೀಗ ವೈರಲ್ ಆಗುತ್ತಿದೆ.

ಇಷ್ಟಕ್ಕೂ ಹೇಡನ್ ಬರೆದ ಪತ್ರದಲ್ಲೇನಿದೆ...
'ಹಿಂದೆಂದೂ ನೋಡಿರದಂತೆ ಭಾರತವು ಸಾಂಕ್ರಾಮಿಕ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದೆ. 140 ಕೋಟಿ ಜನರಿರುವ ಈ ದೇಶ ವೈರಸ್ ಸೋಂಕು ವಿರುದ್ಧ ಹೋರಾಡುತ್ತಿರುವಾಗ, ವಿಶ್ವ ಮಾಧ್ಯಮಗಳು ದೇಶದ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ಅಲ್ಲಿ ಯಾವುದೇ ಸಾರ್ವಜನಿಕ ಯೋಜನೆಯ ಅನುಷ್ಠಾನ  ಮತ್ತು ಅದರ ಯಶಸ್ಸು ದೊಡ್ಡ ಸವಾಲಾಗಿರುತ್ತದೆ. ನಾನು ಒಂದು ದಶಕದಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ವಿಶೇಷವಾಗಿ ತಮಿಳುನಾಡು ನನ್ನ ಆಧ್ಯಾತ್ಮಿಕ ನೆಲೆ ಎಂದು ನಾನು ಪರಿಗಣಿಸುತ್ತೇನೆ. ಅಂತಹ ವೈವಿಧ್ಯಮಯ ಮತ್ತು ವಿಶಾಲವಾದ ದೇಶವನ್ನು ನಡೆಸುವ  ಕಾರ್ಯವನ್ನು ವಹಿಸಿಕೊಂಡಿರುವ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವವಿದೆ.

ನಾನು ಹೋದಲ್ಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದ ಮತ್ತು ವಾತ್ಸಲ್ಯದಿದ ಸ್ವಾಗತಿಸಿದರು, ಅದಕ್ಕಾಗಿ ನಾನು ಅವರಿಗೆ ಆಭಾರಿ. ನಾನು ಹಲವಾರು ವರ್ಷಗಳಿಂದ ಭಾರತನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದ್ದರಿಂದಲೇ ಈ ಕ್ಷಣದಲ್ಲಿ ನೋವಿಗೆ ನನ್ನ ಹೃದಯ  ಮಿಡಿಯುತ್ತಿದೆ. ಈ ಹೊತ್ತಲ್ಲಿ ಕೆಟ್ಟ ಮಾಧ್ಯಮಗಳು ಸಹ ಭಾರತದ ಜನರ ಮತ್ತು ಅವರ ಅಸಂಖ್ಯಾತ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವ್ಯಾಪ್ತಿಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟ ಕ್ರಿಕೆಟಿಗ ಮತ್ತು ಕ್ರೀಡಾ ಪ್ರೇಮಿಯಾಗಿ ನಾನು  ಕ್ರೀಡೆಯೊಂದಿಗಿನ ನನ್ನ ಒಡನಾಟವನ್ನು ಉಳಿಸಿಕೊಂಡಿದ್ದೇನೆ. ನನ್ನ ಸಹವರ್ತಿ ದೇಶವಾಸಿಗಳು ಅನೇಕ ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಪಂಚವು ಭಾರತದತ್ತ ಬಾಗಿಲು ಮುಚ್ಚುವ ಮತ್ತು ಸರ್ಕಾರವನ್ನು ದೂಷಿಸುತ್ತಿರುವಾಗ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವವರಿಗೆ  ಲಭ್ಯವಿಲ್ಲದ ದೃಷ್ಟಿಕೋನವನ್ನು ನೀಡುವುದಕ್ಕಾಗಿ ಭಾರತದಲ್ಲಿದ್ದಾಗ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಯೋಚಿಸಿದೆ ಎಂದು ಹೇಡನ್ ಬರೆದಿದ್ದಾರೆ.

ಹೇಡನ್ ಪತ್ರಕ್ಕೆ ಆನಂದ್ ಮಹಿಂದ್ರಾ ಬೆಂಬಲ
ಇನ್ನು ಮಾಥ್ಯೂ ಹೇಡನ್ ಬರೆದ ಪತ್ರಕ್ಕೆ ಖ್ಯಾತ ಉದ್ಯಮಿ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಬೆಂಬಲ ಸೂಚಿಸಿದ್ದು, ಹೇಡನ್ ಅವರ ಭಾವನಾತ್ಮಕ ಪೋಸ್ಟ್ ಟ್ವೀಟ್ ಕ್ರಿಕೆಟಿಗನ ಹೃದಯವು ಅವನ ದೇಹಕ್ಕಿಂತ ದೊಡ್ಡದಾಗಿದೆ ಎಂದು ತೋರಿಸುತ್ತದೆ. ಸಹಾನುಭೂತಿ ಮತ್ತು ನಿಮ್ಮ ಪ್ರೀತಿಗೆ  ಧನ್ಯವಾದಗಳು ಎಂದು ಬರೆದಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.