ಕೋವಿಡ್-19 ವಿರುದ್ದದ ಹೋರಾಟಕ್ಕೆ ಕೊಹ್ಲಿ, ಅನುಷ್ಕಾ ಶರ್ಮಾರಿಂದ 2 ಕೋಟಿ ರೂ.ದೇಣಿಗೆ
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶದ ಹೋರಾಟವನ್ನು ಬೆಂಬಲಿಸುವ ನಿಧಿ ಸಂಗ್ರಹ ಯೋಜನೆಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ 2 ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶದ ಹೋರಾಟವನ್ನು ಬೆಂಬಲಿಸುವ ನಿಧಿ ಸಂಗ್ರಹ ಯೋಜನೆಗೆ
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ 2 ಕೋಟಿ ರೂ. ದೇಣಿಗೆಯನ್ನು
ನೀಡಿದ್ದಾರೆ.
ಅಂತರ್ ಜಾಲದ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಭಾರತದ ಬೃಹತ್ ಅಂತರ್ಜಾಲ ಸೈಟ್ ಆಗಿರುವ 'ಕೆಟೊ' ಮೂಲಕ ಅವರಿಬ್ಬರು ದೇಣಿಗೆ ಸಂಗ್ರಹಿಸುತ್ತಿದ್ದು, ದೇಶದಲ್ಲಿನ ಕೋವಿಡ್-19 ಪರಿಹಾರಕ್ಕಾಗಿ 7 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಈ ಉದ್ದೇಶಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸಿರುವುದಾಗಿ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಕೆಟೊನಲ್ಲಿ ಏಳು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಅಭಿಯಾನದಿಂದ ಸಂಗ್ರಹಿಸಿದ ಹಣವನ್ನು ಆಕ್ಸಿಜನ್, ವೈದ್ಯಕೀಯ
ಮಾನವ ಸಂಪನ್ಮೂಲ, ಲಸಿಕೆ ಬಗ್ಗೆ ಅರಿವು ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಂಡಾಗಿನಿಂದಲೂ ನಮ್ಮ ಆರೋಗ್ಯ ಸವಾಲು ಎದುರಿಸುತ್ತಿದ್ದು, ನಾವೆಲ್ಲ ಒಗ್ಗೂಡುವ ಅಗತ್ಯವಿದೆ ಮತ್ತು ನಮ್ಮ ದೇಶಕ್ಕಾಗಿ ನೆರವು ನೀಡಬೇಕಾಗಿದೆ ಎಂದು ಕೊಹ್ಲಿ ಇನ್ಸಾಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದು, ಕೋವಿಡ್-19 ಪರಿಹಾರಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಘೋಷಿಸಿದ್ದೇವೆ. ನಮ್ಮ ಬೆಂಬಲಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.
ಒಗ್ಗೂಡದಿದ್ದಲ್ಲಿ ಕೋವಿಡ್-19 ವಿರುದ್ಧ ಗೆಲುವು ಅಸಾಧ್ಯ, ನಮ್ಮ ಅಭಿಯಾನದಲ್ಲಿ ಜೊತೆಯಾಗಿ ಎಂದು ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


