ಕ್ರಿಕೆಟ್

ಮನೆಗೆ ನುಗ್ಗಿ ಗನ್ ತೋರಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಕಿಡ್ನಾಪ್!

ಆಸೀಸ್ ಟೆಸ್ಟ್ ತಂಡದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಅವರನ್ನು ಕಿಡ್ನಾಪ್ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಮನೆಗೆ ನುಗ್ಗಿ ಗನ್ ತೋರಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಕಿಡ್ನಾಪ್!
ಸ್ಟುವರ್ಟ್ ಮ್ಯಾಕ್ ಗಿಲ್
Published On :

ಸಿಡ್ನಿ: ಆಸೀಸ್ ಟೆಸ್ಟ್ ತಂಡದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಅವರನ್ನು ಕಿಡ್ನಾಪ್ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಏಪ್ರಿಲ್ 14ರಂದು ಸ್ಟುವರ್ಟ್ ಮ್ಯಾಕ್ ಗಿಲ್ ಅವರನ್ನು ಸಿಡ್ನಿಯ ಅವರ ನಿವಾಸದಿಂದ ಅಪಹರಣ ಮಾಡಲಾಗಿದ್ದು 21 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಮ್ಯಾಕ್ ಗಿಲ್ ರನ್ನು ಬಿಡುಗಡೆ ಮಾಡಲಾಗಿದ್ದು ಈ ಸಂಬಂಧ ನಾಲ್ವರನ್ನು ಆಸ್ಟ್ರೇಲಿಯಾದ ಪೊಲೀಸರು ಬಂಧಿಸಿದ್ದಾರೆ. 

ಮ್ಯಾಕ್ ಗಿಲ್ ಅವರಿಗೆ ಹೊಡೆದು, ಗನ್ ತೋರಿಸಿ ಬೆದರಿಸಿ ಮೂವರು ಬಲವಂತವಾಗಿ ಆವರನ್ನು ಕರೆದೊಯ್ದಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿತ್ತು. 50 ವರ್ಷದ ಸ್ಟುವರ್ಟ್ ರನ್ನು 46 ವರ್ಷದ ವ್ಯಕ್ತಿಯೋರ್ವ ಅಪಹರಿಸಿದ್ದರು ಎಂದು ನ್ಯೂ ಸೌತ್ ವೇಲ್ಸ್ ಪೊಲೀಸುರ ತಿಳಿಸಿದ್ದಾರೆ. 

ನಂತರ ಬೆಲ್ಮೋರ್ ಎಂಬ ಪ್ರದೇಶದಲ್ಲಿ ಅವರನ್ನು ಅಪಹರಣಕಾರರು ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಏಪ್ರಿಲ್ 20ರಂದು ಪ್ರಕರಣ ದಾಖಲಾಗಿತ್ತು.

1998 ರಿಂದ 2008 ರವರೆಗೂ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಲೆಗ್ ಸ್ಪಿನ್ನರ್ ಸ್ಟುವರ್ಟ್ ಮ್ಯಾಕ್ ಗಿಲ್ 44 ಟೆಸ್ಟ್ ಪಂದ್ಯಗಳನ್ನಾಡಿದ್ದು 208 ವಿಕೆಟ್ ಗಳನ್ನು ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.