ಐಪಿಎಲ್-2022 ಸೀಜನ್ ನಿಂದಲೂ ಇಂಗ್ಲೆಂಡ್ ಸ್ಟಾರ್ ಬೌಲರ್ ಜೋಫ್ರೆ ಆರ್ಚರ್ ದೂರ
ಐಪಿಎಲ್ – 2022 ಸೀಜನ್ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಆದರೆ ಇಂಗ್ಲೆಂಡ್ ಸ್ಟಾರ್ ವೇಗಿ ಜೋಫ್ರೆ ಆರ್ಚರ್ ಮೆಗಾ ಹರಾಜಿನಿಂದ ದೂರ ಉಳಿಯಲಿದ್ದಾರೆ.

ಲಂಡನ್: ಐಪಿಎಲ್ – 2022 ಸೀಜನ್ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಆದರೆ ಇಂಗ್ಲೆಂಡ್ ಸ್ಟಾರ್ ವೇಗಿ ಜೋಫ್ರೆ ಆರ್ಚರ್ ಮೆಗಾ ಹರಾಜಿನಿಂದ ದೂರ ಉಳಿಯಲಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್, ಐಪಿಎಲ್-2021ರ ಋತುವಿನಿಂದಲೂ ಹೊರಗುಳಿದಿದ್ದಾರೆ. ಆದರೆ, ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ.
IPL-2022 ಋತುವಿನ ಮೆಗಾ ಹರಾಜಿನ ಮೊದಲು ರಾಜಸ್ಥಾನ ತಂಡ ಆರ್ಚರ್ ರನ್ನು ಉಳಿಸಿಕೊಂಡಿಲ್ಲ. ಇದರೊಂದಿಗೆ ಮೆಗಾ ಹರಾಜಿನಲ್ಲಿ ಅವರಿಗಾಗಿ ಹಲವು ತಂಡಗಳು ಪೈಪೋಟಿ ನಡೆಸಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆರ್ಚರ್ ಇತ್ತೀಚೆಗೆ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರಿಗೆ 15 ತಿಂಗಳು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಆರ್ಚರ್ ಅವರ ಬಲಗೈಗೆ ಎರಡನೇ ಅಪರೇಷನ್ “ಡಿಸೆಂಬರ್ 11 ರಂದು ಲಂಡನ್‌ನಲ್ಲಿ ನಡೆಯಿತು. ಅವರ ಅಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ಅವರು ಕ್ರಿಕೆಟ್ ಮೈದಾನಕ್ಕೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಮುಂಬರಲಿರುವ ಎಲ್ಲ ಸರಣಿಗಳಿಗಳಿಗೆ ಆರ್ಚರ್ ಲಭ್ಯವಾಗುವುದಿಲ್ಲ ಎಂದು ಇಂಗ್ಲೇಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿದೆ.
ಗಾಯದ ಸಮಸ್ಯೆಯಿಂದ ಆರ್ಚರ್ ಕಳೆದ 9 ತಿಂಗಳಿಂದ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದರು. ಪ್ರತಿಷ್ಠಿತ ಆಶಸ್ ಸರಣಿಯಿಂದಲೂ ಅವರು ದೂರಸರಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


