ಕ್ರಿಕೆಟ್

ಕೋವಿಡ್ ಪ್ರಕರಣಗಳಿದ್ದರೂ ಟೀಂ ಇಂಡಿಯಾ ವರ್ಸಸ್ ದಕ್ಷಿಣ ಆಫ್ರಿಕಾ ಸರಣಿ ಮುಂದುವರಿಯುತ್ತದೆ!

ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಬಂದರೂ ಐಸೋಲೇಟ್ ಜೊತೆಗೆ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಗಳು ಮುಂದುವರೆಯಲಿವೆ.

ಕೋವಿಡ್ ಪ್ರಕರಣಗಳಿದ್ದರೂ ಟೀಂ ಇಂಡಿಯಾ ವರ್ಸಸ್ ದಕ್ಷಿಣ ಆಫ್ರಿಕಾ ಸರಣಿ ಮುಂದುವರಿಯುತ್ತದೆ!
ಕೊಹ್ಲಿ
Published On :

ನವದೆಹಲಿ: ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಬಂದರೂ ಐಸೋಲೇಟ್ ಜೊತೆಗೆ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಗಳು ಮುಂದುವರೆಯಲಿವೆ.

ಎರಡು ತಂಡಗಳ ನಡುವಿನ ಮುಂಬರುವ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಬಿಸಿಸಿಐ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪರಸ್ಪರ ಒಪ್ಪಿಕೊಂಡಿವೆ ಎಂದು ಆತಿಥೇಯ ಮಂಡಳಿಯ ವೈದ್ಯಕೀಯ ಅಧಿಕಾರಿ ಶುಐಬ್ ಮಂಜ್ರಾ ಹೇಳಿದ್ದಾರೆ.

ಡಿಸೆಂಬರ್ 26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ನಂತರ ಜೋಹಾನ್ಸ್‌ಬರ್ಗ್(ಜನವರಿ 3-7) ಮತ್ತು ಕೇಪ್ ಟೌನ್ (ಜನವರಿ 11-15) ನಲ್ಲಿ ಟೆಸ್ಟ್‌ ಪಂದ್ಯಗಳು ನಡೆಯಲಿವೆ. ಟೆಸ್ಟ್ ಸರಣಿ ನಂತರ ಜನವರಿ 19, 21 ಮತ್ತು 23ರಂದು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿವೆ.

ಹೊಸ ರೂಪಾಂತರವಾದ ಒಮಿಕ್ರಾನ್ ಕಂಡುಬಂದರೆ, ದಕ್ಷಿಣ ಆಫ್ರಿಕಾದಲ್ಲಿ ಪರಿಸ್ಥಿತಿ ಹದಗೆಟ್ಟರೆ, ಬಿಸಿಸಿಐ ಪ್ರವಾಸದಿಂದ ಹಿಂದೆ ಸರಿಯಬಹುದು ಎಂಬ ನಿರ್ದಿಷ್ಟ ಒಪ್ಪಂದವಿದ್ದರೂ, ಅವರು ಸದ್ಯಕ್ಕೆ ಯಾವುದೇ ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಭಾರತದೊಂದಿಗೆ ಪ್ರೋಟೋಕಾಲ್ ಅನ್ನು ಚರ್ಚಿಸಿದ್ದೇವೆ ಮತ್ತು ಒಪ್ಪಿಕೊಂಡಿದ್ದೇವೆ. ಬಯೋಬಬಲ್ ನಲ್ಲಿರುವ ಎಲ್ಲರಿಗೂ ಲಸಿಕೆ ನೀಡಲಾಗಿದೆ ಎಂದು ಪರಿಗಣಿಸಿ, ಪ್ರಾಯೋಗಿಕವಾಗಿ ಸ್ಥಿರವಾಗಿದ್ದರೆ ಪಾಸಿಟಿವ್ ಪ್ರಕರಣಗಳು ವರದಿಯಾದರೂ ಅವರನ್ನು ಹೋಟೆಲ್ ಕೋಣೆಯೊಳಗೆ ಪ್ರತ್ಯೇಕಗೊಳ್ಳುತ್ತದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪಿಟಿಐಗೆ ಮಂಜ್ರಾ ಅವರು ಹೇಳಿದ್ದಾರೆ.

ನಿಕಟ ಸಂಪರ್ಕಗಳು ಕಟ್ಟುನಿಟ್ಟಾಗಿ ಗಮನಿಸಿ, ವೈದ್ಯರಿಂದ ಪ್ರತಿದಿನ ಪರೀಕ್ಷಿಸಲ್ಪಟ್ಟ ನಂತರ ತರಬೇತಿ ಮುಂದುವರಿಸುತ್ತವೆ ಎಂದು ಅವರು ಹೇಳಿದರು.

ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಪ್ರತಿದಿನ ನಡೆಸಲಾಗುವುದು ಮತ್ತು ಧನಾತ್ಮಕ ಪ್ರಕರಣಗಳು ಸಂಭವಿಸುವ ಸಂದರ್ಭಕ್ಕೆ ಎರಡೂ ತಂಡಗಳು ಸಿದ್ಧವಾಗಿವೆ ಎಂದು ತಿಳಿದುಬಂದಿದೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಸರಣಿ ಮುಂದುವರಿಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.