ಆಟದ ಮಧ್ಯೆ ಅಂಪೈರ್ ಗೆ ಕೊಲೆ ಬೆದರಿಕೆ; ಆಟಗಾರನಿಗೆ ಜೀವಮಾನ ನಿಷೇಧ!
ಕ್ರಿಕೆಟ್‌ನಲ್ಲಿ ಆಟಗಾರರ ನಡುವೆ ಭಿನ್ನಾಭಿಪ್ರಾಯ, ಕಲಹಗಳು ಸಹಜ. ಒಮ್ಮೊಮ್ಮೆ ಇವು ಹೊಡೆದಾಟದ ಮಟ್ಟಕ್ಕೆ ತಲುಪುತ್ತವೆ.

ವೆಲ್ಲಿಂಗ್ಟನ್: ಕ್ರಿಕೆಟ್‌ನಲ್ಲಿ ಆಟಗಾರರ ನಡುವೆ ಭಿನ್ನಾಭಿಪ್ರಾಯ, ಕಲಹಗಳು ಸಹಜ. ಒಮ್ಮೊಮ್ಮೆ ಇವು ಹೊಡೆದಾಟದ ಮಟ್ಟಕ್ಕೆ ತಲುಪುತ್ತವೆ.
ಆದರೆ, ಇಂತಹ ಘಟನೆಗಳು ನಡೆಯದಂತೆ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ವಿವಾದ ದೊಡ್ಡದಾಗದಂತೆ ನೋಡಿಕೊಳ್ಳುತ್ತಾರೆ. ಅಂತಹ ಅಂಪೈರ್ ರನ್ನೇ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದರೆ.. ಆಟಗಾರರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಅವಕಾಶ ಇರಲಿದೆ. ಇಂತಹ ಕೆಲಸವನ್ನು ಪಾವರ್ಟಿ ಬೇ ಕ್ರಿಕೆಟ್ ಸಂಸ್ಥೆ ಮಾಡಿದೆ.
ಪಂದ್ಯದ ವೇಳೆ ಅಂಪೈರ್ ಮೇಲೆ ಕೈ ಮಾಡಿದ್ದಲ್ಲದೆ ಕೊಲೆಮಾಡುವುದಾಗಿ ತಿಮೋತಿ ವೀರ್ ಎಂಬ ಕ್ಲಬ್ ಕ್ರಿಕೆಟಿಗ ಮೈದಾನದಲ್ಲಿ ಎಚ್ಚರಿಕೆ ನೀಡಿದ್ದರು. ಡಿಸೆಂಬರ್ 4 ರಂದು ಗಿಸ್ಬೋರ್ನ್‌ನಲ್ಲಿ ಪಂದ್ಯ ನಡೆಯಿತು. ಪ್ರಕರಣದ ತನಿಖೆ ನಡೆಸುತ್ತಿರುವ ಪಾವರ್ಟಿ ಬೇ ಕ್ರಿಕೆಟ್ ಸಂಸ್ಥೆ ತಿಮೋತಿ ವಿರುದ್ಧ ಗಂಭೀರ ಕ್ರಮ ಕೈಗೊಂಡಿದೆ. ಕ್ರಿಕೆಟ್ ನಿಯಮಗಳ ಪ್ರಕಾರ ಅಂಪೈರ್ ವಿರುದ್ದ ದುರ್ವತನೆ ತೋರಿದ್ದಲ್ಲದೆ, ಸಾಯಿಸುವುದಾಗಿ ಎಚ್ಚರಿಕೆ ನೀಡಿ ನೀತಿ ಸಂಹಿತೆಯ ಲೆವೆಲ್-4 ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.
ಈ ಕೃತ್ಯಗಳಿಗಾಗಿ ಇನ್ನು ಮುಂದೆ ಕ್ರಿಕೆಟ್ ಆಡದಂತೆ ತಿಮೋತಿಗೆ ಆಜೀವ ನಿಷೇಧ ವಿಧಿಸುವುದಾಗಿ ಸಂಸ್ಥೆ ಹೇಳಿದೆ ಆದರೆ, ತಿಮೋತಿ ಈ ಹಿಂದೆಯೂ ಇದೇ ರೀತಿ ದುರ್ವತನೆ ಪ್ರದರ್ಶಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದರು.. ಹಾಗಾಗಿ ಹೊಸ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಜೀವಿತಾವಧಿ ನಿಷೇಧ ವಿಧಿಸುವುದುದಾಗಿ ಪಾವರ್ಟಿ ಬೇ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಐಸಾಕ್ ಹ್ಯೂಸ್ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


