ಕ್ರಿಕೆಟ್

ಕೆಣಕಿದ ಜಾಸ್ ಬಟ್ಲರ್ ಗೆ ಬೌಂಡರಿ ಮೂಲಕ ತಿರುಗೇಟು ನೀಡಿದ ಜಸ್ ಪ್ರೀತ್ ಬುಮ್ರಾ, ಮೈದಾನದಲ್ಲೇ ಆಟಗಾರರ ವಾಗ್ಯುದ್ಧ

ಸ್ಲಡ್ಜಿಂಗ್ ಮೂಲಕ ತಮ್ಮ ಏಕಾಗ್ರತೆ ಕೆಡಿಸಲು ಬಂದ ಇಂಗ್ಲೆಂಡ್ ನ ಜಾಸ್ ಬಟ್ಲರ್ ಯತ್ನಕ್ಕೆ ಭಾರತದ ಜಸ್ ಪ್ರೀತ್ ಬುಮ್ರಾ ಬೌಂಡರಿ ಮೂಲಕ ದಿಟ್ಟ ಉತ್ತರ ನೀಡಿದ ಘಟನೆ ನಡೆಯಿತು.

ಕೆಣಕಿದ ಜಾಸ್ ಬಟ್ಲರ್ ಗೆ ಬೌಂಡರಿ ಮೂಲಕ ತಿರುಗೇಟು ನೀಡಿದ ಜಸ್ ಪ್ರೀತ್ ಬುಮ್ರಾ, ಮೈದಾನದಲ್ಲೇ ಆಟಗಾರರ ವಾಗ್ಯುದ್ಧ
ಬುಮ್ರಾ ಬಟ್ಲರ್ ವಾಗ್ಯುದ್ಧ
Published On :

ಲಾರ್ಡ್ಸ್: ಸ್ಲಡ್ಜಿಂಗ್ ಮೂಲಕ ತಮ್ಮ ಏಕಾಗ್ರತೆ ಕೆಡಿಸಲು ಬಂದ ಇಂಗ್ಲೆಂಡ್ ನ ಜಾಸ್ ಬಟ್ಲರ್ ಯತ್ನಕ್ಕೆ ಭಾರತದ ಜಸ್ ಪ್ರೀತ್ ಬುಮ್ರಾ ಬೌಂಡರಿ ಮೂಲಕ ದಿಟ್ಟ ಉತ್ತರ ನೀಡಿದ ಘಟನೆ ನಡೆಯಿತು.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಐದನೇ ದಿನದಾಟದ ಭಾರತದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಭಾರತದ ಜಸ್ ಪ್ರೀತ್ ಬುಮ್ರಾ ಮತ್ತು ಜಾಸ್ ಬಟ್ಲರ್ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನಿಂಗ್ಸ್ ನ 91ನೇ ಓವರ್ ನಲ್ಲಿ ಬುಮ್ರಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಇಂಗ್ಲೆಂಡ್ ವೇಗಿಗಳು ಶಾರ್ಟ್  ಬಾಲ್ ಗಳ ಮೂಲಕ ಬುಮ್ರಾರನ್ನು ಕೆಣಕಿದರು. ಬಳಿಕ ಜಾಸ್ ಬಟ್ಲರ್ ಸ್ಲಡ್ಜ್ ಗೆ ಮುಂದಾದರು. ಈ ವೇಳೆ ತಿರುಗಿಬಿದ್ದ ಬುಮ್ರಾ ಕೋಪದಲ್ಲಿ ಬಟ್ಲರ್ ರತ್ತ ಬೆರಳು ತೋರಿಸಿ ಅಂಪೈರ್ ಗೆ ಏನೋ ಹೇಳಿದರು. ಈ ವೇಳೆ ಅಂಪೈರ್ ಗಳು ಮಧ್ಯ ಪ್ರವೇಶಿಸಿ ಬುಮ್ರಾರನ್ನು ಸಮಾಧಾನಗೊಳಿಸಲು ಮುಂದಾದರು. ಇದೇ  ಹೊತ್ತಿಗೆ ಅಲ್ಲಿಗೆ ಆಗಮಿಸಿದ ಜೋ ರೂಟ್ ಗೂ ಬುಮ್ರಾ ಏನೋ ಹೇಳಿದರು.

ಬಳಿಕ ಅಂಪೈರ್ ಗಳು ಬುಮ್ರಾರನ್ನು ಸಮಾಧಾನಗೊಳಿಸಿದರು. ಬಳಿಕ ಮುಂದಿನ ಎಸೆತದಲ್ಲೇ ಮಾರ್ಕ್ ವುಡ್ ಎಸೆತವನ್ನು ಕಟ್ ಮಾಡುವ ಮೂಲಕ ಬೌಂಡರಿ ಗಿಟ್ಟಿಸಿದ ಬುಮ್ರಾ ಜಾಸ್ ಬಟ್ಲರ್ ಗೆ ತಿರುಗೇಟು ನೀಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ  ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ನೆರವಾದ ಬುಮ್ರಾ-ಶಮಿ ಜೊತೆಯಾಟಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.