ಆರ್‌ಸಿಬಿಗೆ ಶಾಕ್! ಅರ್ಧಕ್ಕೇ ಐಪಿಎಲ್ ತೊರೆದ ಕೇನ್ ರಿಚರ್ಡ್‌ಸನ್, ಜಂಪಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ ರಿಚರ್ಡ್‌ಸನ್ ಮತ್ತು ಆಡಮ್ ಜಂಪಾ ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಈ ಬಗ್ಗೆ ಫ್ರ್ಯಾಂಚೈಸ್ ನ ಹೇಳಿಕೆ ಸ್ಪಷ್ಟಪಡಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ ರಿಚರ್ಡ್‌ಸನ್ ಮತ್ತು ಆಡಮ್ ಜಂಪಾ ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಈ ಬಗ್ಗೆ ಫ್ರ್ಯಾಂಚೈಸ್ ನ ಹೇಳಿಕೆ ಸ್ಪಷ್ಟಪಡಿಸಿದೆ.
"ವೈಯಕ್ತಿಕ ಕಾರಣಗಳಿಗಾಗಿ" ಈ ಆಟಗಾರರು ಟೂರ್ನಿಯಿಂದ ದೂರವಿರಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಿಂದ ಆಂಡ್ರ್ಯೂ ಟೈ ಭಾನುವಾರ ನಿರ್ಗಮಿಸಿದ ನಂತರ ರಿಚರ್ಡ್‌ಸನ್ ಮತ್ತು ಜಂಪಾ ಐಪಿಎಲ್ ತೊರೆದ ಎರಡನೇ ಮತ್ತು ಮೂರನೇ ಆಸ್ಟ್ರೇಲಿಯಾ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ -19 ಪರಿಸ್ಥಿತಿ ಉಲ್ಬಣವಾಗುತ್ತಿರುವ ಕಾರಣ ಟೈ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.
ಐಪಿಎಲ್ 2021 ರಲ್ಲಿ ರಿಚರ್ಡ್‌ಸನ್ ರಾಯಲ್ ಚಾಲೆಂಜರ್ಸ್ ಪರ ಒಂದು ಪಂದ್ಯವನ್ನು ಆಡಿದ್ದರೆ ಜಂಪಾ ಫೀಲ್ಡಿಗೆ ಇಳಯಲೇ ಇಲ್ಲ. ರಿಚರ್ಡ್‌ಸನ್ ಮತ್ತು ಜಂಪಾ ಹೊರಹೋಗುವುದರೊಂದಿಗೆ, ರಾಯಲ್ ಚಾಲೆಂಜರ್ಸ್‌ನಲ್ಲೀಗ ಸಾಗರೋತ್ತರ ಆಟಗಾರರ ಸಂಖ್ಯೆ ಆರಕ್ಕೆ ಇಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


