ಐಪಿಎಲ್ 2021: ಕೋಲ್ಕತ್ತಾ ವಿರುದ್ಧ ರಾಜಸ್ಥಾನ್ಗೆ 6 ವಿಕೆಟ್ ಗಳ ಭರ್ಜರಿ ಗೆಲುವು
ಕ್ರಿಸ್ ಮೋರಿಸ್ ಮಾರಕ ಬೌಲಿಂಗ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್ಆರ್ ಎರಡನೇ ಗೆಲುವು ಸಾಧಿಸಿದೆ.

ಮುಂಬೈ: ಕ್ರಿಸ್ ಮೋರಿಸ್ ಮಾರಕ ಬೌಲಿಂಗ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್ಆರ್ ಎರಡನೇ ಗೆಲುವು ಸಾಧಿಸಿದೆ.
ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, ನಿತೀಶ್ ರಾಣಾ 22, ಶುಬ್ಮನ್ ಗಿಲ್ 11, ರಾಹುಲ್ ತ್ರಿಪಾಠಿ 36, ಸುನಿಲ್ ನರೈನ್ 6, ದಿನೇಶ್ ಕಾರ್ತಿಕ್ 25, ಆ್ಯಂಡ್ರೆ ರಸೆಲ್ 9, ಪ್ಯಾಟ್ ಕಮಿನ್ಸ್ 10 ರನ್ನೊಂದಿಗೆ ನಿಗದಿತ 20 ಓವರ್ಗೆ 9 ವಿಕೆಟ್ ಕಳೆದು 133 ರನ್ ಗಳಿಸಿತು.
ಗೆಲುವಿಗೆ 134 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ 22, ನಾಯಕ ಸಂಜು ಸ್ಯಾಮ್ಸನ್ ಅಜೇಯ 44, ಶಿವಂ ದೂಬೆ 22, ಡೇವಿಡ್ ಮಿಲ್ಲರ್ ಅಜೇಯ 24 ರನ್ನೊಂದಿಗೆ 18.5 ಓವರ್ಗೆ ಗೆಲುವು ಸಾಧಿಸಿತು.
ಆರ್ ಆರ್ ಪರ ಕ್ರಿಸ್ ಮೋರಿಸ್ 4, ಜಯದೇವ್ ಉನಾದ್ಕತ್ 1, ಚೇತನ್ ಸಕಾರಿಯಾ 1, ಮುಸ್ತಫಿಝುರ್ ರಹ್ಮಾನ್ 1 ವಿಕೆಟ್ ಪಡೆದರೆ, ಕೆಕೆಆರ್ ಪರ ವರುಣ್ ಚಕ್ರವರ್ತಿ 2, ಶಿವಂ ಮಾಜಿ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


