ಸಿಎಸ್‌ಕೆ ಅಭ್ಯಾಸ ಪಂದ್ಯದಲ್ಲಿ ಧೋನಿ ದೈತ್ಯ ಸಿಕ್ಸರ್ ಗೆ ದಂಗಾದ ಮುರಳಿ ವಿಜಯ್!ವಿಡಿಯೋ
ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಪಂದ್ಯಗಳಿಂದ ಒಂದು ವರ್ಷದಿಂದ ದೂರವಿರಬಹುದು ಆದರೆ, 39 ವರ್ಷದ ಆಟಗಾರನ ಪವರ್ ಪುಲ್ ಹೊಡೆತಗಳ ಬಗ್ಗೆ ಯಾರು ಕೂಡಾ ಎರಡು ಮಾತನಾಡುವಂತಿಲ್ಲ.

ದುಬೈ: ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಪಂದ್ಯಗಳಿಂದ ಒಂದು ವರ್ಷದಿಂದ ದೂರವಿರಬಹುದು ಆದರೆ, 39 ವರ್ಷದ ಆಟಗಾರನ ಪವರ್ ಪುಲ್ ಹೊಡೆತಗಳ ಬಗ್ಗೆ ಯಾರು ಕೂಡಾ ಎರಡು ಮಾತನಾಡುವಂತಿಲ್ಲ.
ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಧೋನಿ ಅವರ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಹಲವು ಮಂದಿ ಅನುಮಾನ ಹೊಂದಿದ್ದರು. ಆದರೆ, ಸಿಎಸ್ ಕೆ ತಂಡ ಇಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಅಂತಹ ಅನುಮಾನಗಳನ್ನು ಅಳಿಸಿಹಾಕಿದೆ.
ಸ್ಪೀನ್ ಬೌಲಿಂಗ್ ನಲ್ಲಿ ಚೆಂಡನ್ನು ಮೈದಾನದಿಂದ ಹೊರಗೆ ಅಟ್ಟಿದ್ದಾರೆ. 35 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಅಭ್ಯಾಸ ಮಾಡುತ್ತಿರುವ ಅಂಗಳದಲ್ಲಿ ಎಂಎಸ್ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೆಂಡನ್ನು ಮೈದಾನದಿಂದ ಹೊರಗೆ ಅಟ್ಟಿದ್ದಾರೆ. ಸಿಎಸ್ ಕೆ ತಂಡದ ಮ್ಯಾನೇಜರ್ ರಸೆಲ್ ರಾಧಕೃಷ್ಣನ್ ಈ ವಿಡಿಯೋವನ್ನು ದಾಖಲಿಸಿದ್ದಾರೆ.
ಮೈದಾನದ ತುದಿಯಲ್ಲಿದ್ದ ಮುರಳಿ ವಿಜಯ್ ಧೋನಿ ಸಿಕ್ಸರ್ ಕಂಡು ದಂಗಾಗಿದ್ದು, ಕ್ಯಾಮರಾದತ್ತ ನೋಡುತ್ತಾ. ಇದು ಪವರ್ ಪುಲ್ ಹೊಡೆತ ಎಂದಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದ ನಂತರ ಅಚ್ಚುಮೆಚ್ಚಿನ ಸೂಪರ್ ಸ್ಟಾರ್ ಧೋನಿ ಅವರ ಸಿಕ್ಸರ್ ನೋಡದಿದ್ದ ಅನೇಕ ಸಿಎಸ್ ಕೆ ಮತ್ತು ಧೋನಿ ಅಭಿಮಾನಿಗಳಿಗೆ ಈ ವಿಡಿಯೋ ಸಕತ್ ಖುಷಿ ಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


