ಲಂಕಾ ಪ್ರಿಮಿಯರ್ ಲೀಗ್‌ನ ಫ್ರಾಂಚೈಸಿ 'ಕ್ಯಾಂಡಿ ಟಸ್ಕರ್ಸ್' ಖರೀದಿಸಿದ ಸೋಹೈಲ್ ಖಾನ್!
ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿ ಗುರುತಿಸಿಕೊಂಡಿರುವ ಸೋಹೈಲ್ ಖಾನ್ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ನ ಫ್ರಾಂಚೈಸಿಯೊಂದನ್ನು ಖರೀದಿಸಿದ್ದಾರೆ.

ಕೊಲಂಬೊ: ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿ ಗುರುತಿಸಿಕೊಂಡಿರುವ ಸೋಹೈಲ್ ಖಾನ್ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ನ ಫ್ರಾಂಚೈಸಿಯೊಂದನ್ನು ಖರೀದಿಸಿದ್ದಾರೆ.
ನವೆಂಬರ್ 21ರಿಂದ ಎಲ್‌ಪಿಎಲ್ ಪ್ರಾರಂಭವಾಗಲಿದ್ದು ಸೋಹೈಲ್ ಖಾನ್ ಕ್ಯಾಂಡಿ ಫ್ರಾಂಚೈಸಿ ಮಾಲೀಕರಾಗಿದ್ದಾರೆ.
ಕ್ಯಾಂಡಿ ಟಸ್ಕರ್ಸ್ ತಂಡದಲ್ಲಿ ಸ್ಥಳೀಯ ಕ್ರಿಕೆಟಿಗ ಕುಸಾಲ್ ಪೆರೆರಾ, ಕುಸಲ್ ಮೆಂಡಿಸ್, ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್, ನುವಾನ್ ಪ್ರದೀಪ್ ಮತ್ತು ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ತಂಡದಲ್ಲಿದ್ದಾರೆ.
"ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಸಾಕಷ್ಟು ಸಾಮರ್ಥ್ಯಗಳಿವೆ. ಈ ರೋಮಾಂಚಕಾರಿ ಟೂರ್ನಿಯ ಭಾಗವಾಗಲು ನಮಗೆ ತುಂಬಾ ಸಂತೋಷವಾಗಿದೆ. ಶ್ರೀಲಂಕಾದ ಅಭಿಮಾನಿಗಳು ಆಟದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ತಂಡವನ್ನು ಬೆಂಬಲಿಸಲು ಅವರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಸೊಹೈಲ್ ಖಾನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಕ್ರಿಸ್ ಗೇಲ್ ನಿಸ್ಸಂಶಯವಾಗಿ ಯುನಿವರ್ಸಲ್ ಬಾಸ್, ಆದರೆ ಅವರು ಒಬ್ಬಂಟಿಯಾಗಿಲ್ಲ, ನಮ್ಮಲ್ಲಿ ಉತ್ತಮ ತಂಡವಿದೆ. ಯುವಕರ ಮತ್ತು ಅನುಭವಿಗಳ ಉತ್ತಮ ಸಮತೋಲನವಿದೆ. ಫೈನಲ್ ಗೇರುವ ಸಾಮರ್ಥ್ಯ ತಂಡಕ್ಕಿದೆ ಎಂದು ನಟ ಹೇಳಿದರು.
ಶ್ರೀಲಂಕಾದ ಮಾಜಿ ನಾಯಕ ಹಶನ್ ತಿಲಕರತ್ನ ಅವರು ಕ್ಯಾಂಡಿ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


