ಐಪಿಎಲ್-2020 ಕೆಕೆಆರ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಗೆಲುವಿನ ಕೇಕೆ
ಐಪಿಎಲ್-2020 ರ 39 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ.

ಐಪಿಎಲ್-2020 ರ 39 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ.
ಕೆಕೆಆರ್ ನೀಡಿದ್ದ ಅತ್ಯಂತ ಕಡಿಮೆ 84 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಅತ್ಯಂತ ಸುಲಭವಾಗಿ ಈ ಪಂದ್ಯವನ್ನು ಗೆದ್ದುಕೊಂಡಿದೆ.
ಆರಂಭಿಕ ಆಟಗಾರರಾದ ದೇವ್ ದತ್ತ ಪಡೀಕಲ್ ಅರೋನ್ ಫಿಂಚ್ ಉತ್ತಮ ಆರಂಭವನ್ನೇ ತಂಡಕ್ಕೆ ನೀಡಿದರು ಆದರೆ ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯಲಿಲ್ಲ. ನಂತರ ಜೊತೆಯಾದ ಗುರ್ಕೀರತ್ ಸಿಂಗ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಸೋಲಿನ ಮೂಲಕ ಕೆಕೆಆರ್ ನ ಪ್ಲೇ ಆಫ್ ಕನಸು ಬಹುತೇಕ ಭಗ್ನಗೊಂಡಂತೆಯೇ ಆಗಿದೆ.
ಇನ್ನು ಆರ್ ಸಿಬಿ ಈ ಪಂದ್ಯದ ಗೆಲುವಿನ ಮೂಲಕ 12 ಪಾಯಿಂಟ್ ಗಳನ್ನು ಪಡೆದಿದ್ದು ಮುಂಬೈ ತಂಡಕ್ಕೆ ಸಮಬಲ ಕಾಯ್ದುಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 6 ಗೆದ್ದಿದ್ದು 3 ಪಂದ್ಯಗಳನ್ನು ಗೆದ್ದಿದೆ. ಐಪಿಎಲ್-2020 ಯಲ್ಲಿ ಡೆಲ್ಲಿ ತಂಡ ಮುಂಚೂಣಿಯಲ್ಲಿದೆ.
Related Article
ಐಪಿಎಲ್-2020 ನಲ್ಲೇ ಅತ್ಯಂತ ಕಡಿಮೆ ಸ್ಕೋರ್: ಕೆಕೆಆರ್ ನ್ನು 84 ರನ್ ಗಳಿಗೆ ಕಟ್ಟಿ ಹಾಕಿದ ಆರ್ ಸಿಬಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


