ಕ್ರಿಕೆಟ್

ಐಪಿಎಲ್-2020 ನಲ್ಲೇ ಅತ್ಯಂತ ಕಡಿಮೆ ಸ್ಕೋರ್: ಕೆಕೆಆರ್ ನ್ನು 84 ರನ್ ಗಳಿಗೆ ಕಟ್ಟಿ ಹಾಕಿದ ಆರ್ ಸಿಬಿ

ಐಪಿಎಲ್-2020 ಆವೃತ್ತಿಯ 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ತಂಡವನ್ನು ಕೇವಲ 84 ರನ್ ಗಳಿಗೆ ಕಟ್ಟಿ ಹಾಕಿದೆ.

ಐಪಿಎಲ್-2020 ನಲ್ಲೇ ಅತ್ಯಂತ ಕಡಿಮೆ ಸ್ಕೋರ್: ಕೆಕೆಆರ್ ನ್ನು 84 ರನ್ ಗಳಿಗೆ ಕಟ್ಟಿ ಹಾಕಿದ ಆರ್ ಸಿಬಿ
ಐಪಿಎಲ್-2020 ನಲ್ಲೇ ಅತ್ಯಂತ ಕಡಿಮೆ ಸ್ಕೋರ್: ಕೆಕೆಆರ್ ನ್ನು 84 ರನ್ ಗಳಿಗೆ ಕಟ್ಟಿ ಹಾಕಿದ ಆರ್ ಸಿಬಿ
Published On :

ಐಪಿಎಲ್-2020 ಆವೃತ್ತಿಯ 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ತಂಡವನ್ನು ಕೇವಲ 84 ರನ್ ಗಳಿಗೆ ಕಟ್ಟಿ ಹಾಕಿದೆ. 

ಟಾಸ್ ಗೆದ್ದು ಆರ್ ಸಿಬಿ ಎದುರು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ತಂಡ 3 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಗುರಿಯಾಗಿತ್ತು. ಕೆಕೆಆರ್ ತಂಡದ ಬ್ಯಾಟ್ಸ್ ಮನ್ ಗಳು ಉತ್ತಮ ಜೊತೆಯಾಟ ಕಟ್ಟುವಲ್ಲಿ ವಿಫಲರಾಗಿ, ಆರ್ ಸಿಬಿ ಮಾರಕ ಬೌಲಿಂಗ್ ಗೆ ಪೆವಿಲಿಯನ್ ಪರೇಡ್ ನಡೆಸಿದರು. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. 

ತಮ್ಮ 300 ನೇ ಟಿ20 ಪಂದ್ಯವನ್ನಾಡಿದ ಇಯಾನ್ ಮಾರ್ಗನ್ ಅವರು ಗಳಿಸಿದ 30 (34) ರನ್ ತಂಡದ ಅತಿ ಗರಿಷ್ಠ ರನ್ ಆಗಿದ್ದು, ಉಳಿದ ಬ್ಯಾಟ್ಸ್ಮನ್ ಗಳು ಎರಡು ಅಂಕಿ ಸ್ಕೋರ್ ಗಳಿಸುವುದಕ್ಕೂ ಸಾಧ್ಯವಾಗಲಿಲ್ಲ. ಕೆಕೆ ಆರ್ ಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.