ಐಪಿಎಲ್-2020: ಬುಕ್ಕಿಗಳು ದುಬೈಗೆ ಬಂದಿದ್ದು, ಅಂದುಕೊಂಡದ್ದನ್ನು ಮಾಡಲು ವಿಫಲರಾಗಿದ್ದಾರೆ- ಬಿಸಿಸಿಐ
ಚಿನ್ನದ ಮೊಟ್ಟೆ ಇಡುವ ಐಪಿಎಲ್ ನಲ್ಲಿ ತಮ್ಮ ಕೈಚಳಕ ತೋರಿಸಲು ಬುಕ್ಕಿಗಳು ದುಬೈಗೆ ಬಂದಿದ್ದು ಆದರೆ ಅವರ ಆಟ ನಡೆಯಲಿಲ್ಲ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.

ದುಬೈ: ಚಿನ್ನದ ಮೊಟ್ಟೆ ಇಡುವ ಐಪಿಎಲ್ ನಲ್ಲಿ ತಮ್ಮ ಕೈಚಳಕ ತೋರಿಸಲು ಬುಕ್ಕಿಗಳು ದುಬೈಗೆ ಬಂದಿದ್ದು ಆದರೆ ಅವರ ಆಟ ನಡೆಯಲಿಲ್ಲ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಭಿಮಾನಿಗಳಲ್ಲಿ ಮಾತ್ರವಲ್ಲ, ಸಾವಿರಾರು ಕೋಟಿ ಆದಾಯ ತಂದುಕೊಡುವ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿದ್ದು ಅದರ ಮೇಲೆ ಬುಕ್ಕಿಗಳ ಕಣ್ಣು ಬಿದ್ದಿತ್ತು. ತ್ವರಿತಗತಿಯಲ್ಲಿ ಹಣ ಸಂಪಾದಿಸುವ ಸಲುವಾಗಿ ಬುಕ್ಕಿಗಳು ದುಬೈಗೆ ಬಂದಿದ್ದಾರೆ. ಆದರೆ ಅವರು ತಾವು ಅಂದುಕೊಂಡಂತೆ ಸ್ಫಾಟ್ ಫಿಕ್ಸಿಂಗ್ ಮಾಡಲು ಸಾಧ್ಯವಾಗಿಲ್ಲ ಎಂದು ಅಜಿತ್ ಸಿಂಗ್ ಹೇಳಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಎಸಿಯು ಮುಖ್ಯಸ್ಥರು, ಬುಕ್ಕಿಗಳು ದುಬೈಗೆ ಬಂದಿದ್ದಾರೆ ಎಂಬುದು ತಂಡದ ಗಮನಕ್ಕೆ ಬಂದಿದೆ. ಆದರೆ ಪಂದ್ಯಾವಳಿಯ ಪಾವಿತ್ರ್ಯವನ್ನು ಮುರಿಯುವಲ್ಲಿ ಅವರು ಯಾವುದೇ ಪ್ರಗತಿಯನ್ನು ಸಾಧಿಸಲಿಲ್ಲ ಎಂದು ಅವರು ಹೇಳಿದರು.
"ದುಬೈನಲ್ಲಿ ಬುಕ್ಕಿಗಳು ಇದ್ದಾರೆ, ಆದರೆ ಅವರಿಗೆ ಯಾವುದೇ ಮುನ್ನಡೆಯಲು ಸಾಧ್ಯವಾಗಲಿಲ್ಲ. ಇಲ್ಲಿಯವರೆಗೆ ಎಲ್ಲವೂ ಸುಗಮ ನಡೆಯುತ್ತಿವೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ ) ಮತ್ತು ಸ್ಥಳೀಯ ಪೊಲೀಸರು ಬಹಳ ಸಹಾಯಕವಾಗಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.
ವಾಸ್ತವವಾಗಿ, ಭಾರತದಲ್ಲಿ ಪ್ರತಿ ಬಾರಿಯೂ ನಡೆಯುವ ಬೆಟ್ಟಿಂಗ್ ಚಟುವಟಿಕೆಗಳನ್ನು ಪತ್ತೆಹಚ್ಚುವ ಪೊಲೀಸರ ವರದಿಗಳನ್ನು ನಾವು ಪಡೆಯುತ್ತಿದ್ದೇವೆ ಎಂದು ಸಿಂಗ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


