ಕ್ರಿಕೆಟ್

ಆಸ್ಟ್ರೇಲಿಯಾ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಆಘಾತ: ರೋಹಿತ್‌, ಇಶಾಂತ್‌ ಆಡುವುದು ಡೌಟ್‌

ಮುಂದಿನ ತಿಂಗಳು ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟಾರ್ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಹೊರಗುಳಿಯುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆ ಮೂಲಕ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾಗೆ ಭಾರಿ ಆಘಾತ ಉಂಟಾಗಿದೆ.

ಆಸ್ಟ್ರೇಲಿಯಾ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಆಘಾತ: ರೋಹಿತ್‌, ಇಶಾಂತ್‌ ಆಡುವುದು ಡೌಟ್‌
ರೋಹಿತ್ ಶರ್ಮಾ-ಇಶಾಂತ್
Published On :

ನವದೆಹಲಿ: ಮುಂದಿನ ತಿಂಗಳು ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟಾರ್ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಹೊರಗುಳಿಯುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆ ಮೂಲಕ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾಗೆ ಭಾರಿ ಆಘಾತ ಉಂಟಾಗಿದೆ.
 
ಈ ಇಬ್ಬರೂ ಹಿರಿಯ ಆಟಗಾರರು ಸದ್ಯ ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಗಾಯದ ಪುನಶ್ಚೇತನ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಗಾಯದಿಂದಾಗಿ ಈ ಇಬ್ಬರನ್ನೂ ಕಳೆದ ತಿಂಗಳು ಬಿಸಿಸಿಐ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ವೈದ್ಯಕೀಯ ತಂಡ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಅವರು ಗಾಯದಿಂದ ಬೇಗ ಚೇತರಿಸಿಕೊಳ್ಳಲು ಕಾರ್ಯನಿರ್ವಹಿಸುತ್ತಿದೆ ಎಂದು ಆ ವೇಳೆ ಬಿಸಿಸಿಐ ಹೇಳಿಕೆ ನೀಡಿತ್ತು. 

ಈ ತಿಂಗಳ ಆರಂಭದಲ್ಲಿ ಬಿಸಿಸಿಐ ರೋಹಿತ್‌ ಶರ್ಮಾ ಅವರನ್ನು  ಟೆಸ್ಟ್‌ ತಂಡ ಆಯ್ಕೆ ಮಾಡಿತ್ತು. ಆದರೆ, ಇದೀಗ ಇಶಾಂತ್‌ ಶರ್ಮಾ ಅವರೊಂದಿಗೆ ರೋಹಿತ್‌ ಶರ್ಮಾ ಟೆಸ್ಟ್‌ ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಅಂದುಕೊಂಡಿದ್ದ ಎಲ್ಲಾ ಯೋಜನೆಗಳು ಉಲ್ಟಾ ಆಗಿವೆ. 

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು, ಫಿಟ್ನೆಸ್‌ ಟೆಸ್ಟ್ ಪಾಸ್‌ ಮಾಡಿದ ಬಳಿಕ ತಡವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆದಬೇಕಾಗಿತ್ತು. ಆದರೆ, ಇತ್ತೀಚಿನ ವರದಿಗಳು ಮುಂಬರುವ ಸರಣಿಗಾಗಿ ರೋಹಿತ್ ಶರ್ಮಾ ಅಥವಾ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ವಿಮಾನ ಹತ್ತುವ ಸಾಧ್ಯತೆ ಇಲ್ಲ ಎಂದು ಸೂಚಿಸುತ್ತಿವೆ.  

ಮುಂಬೈ ಮಿರರ್‌ ವರದಿಯ ಪ್ರಕಾರ, ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಈ ಇಬ್ಬರೂ ಸರಿಯಾದ ಸಮಯಕ್ಕೆ ಫಿಟ್‌ ಆಗುವುದು ತುಂಬಾ ಅನಿವಾರ್ಯತೆ ಇತ್ತು. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಡಿಸೆಂಬರ್‌ 17 ರಿಂದ ಆರಂಭವಾಗುತ್ತಿದೆ. ಅಲ್ಲದೆ, ಕೋವಿಡ್‌-19 ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಈ ಇಬ್ಬರೂ ಆಸ್ಟ್ರೇಲಿಯಾಗೆ ತೆರಳಿದರೂ ಅಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಈ ಎಲ್ಲಾ ನಿಯಮಗಳನ್ನು ಸುಸೂತ್ರವಾಗಿ ನಡೆಯಬೇಕಾದರೆ, ಸರಿಯಾದ ಸಮಯಕ್ಕೆ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಫಿಟ್‌ ಆಗಬೇಕು. 

ಇತ್ತೀಚೆಗೆ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಅವರ ಫಿಟ್ನೆಸ್‌ ಕುರಿತು  ತಜ್ಞರಿಂದ ಚರ್ಚೆ ನಡೆಸಲಾಗಿತ್ತು.  ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಈ ಇಬ್ಬರನ್ನೂ ಕಳುಹಿಸಲಾಗುವುದಿಲ್ಲ ಎಂದು ಪರಿಸ್ಥಿತಿಯಿಂದ ತಿಳಿದುಬಂದಿದೆ. ಟೀಮ್‌ ಮ್ಯಾನೇಜ್‌ಮೆಂಟ್‌, ಆಯ್ಕೆದಾರರಿಗೆ ಹಾಗೂ ಬಿಸಿಸಿಐಗೆ ಈ ಇಬ್ಬರೂ ಟೆಸ್ಟ್‌ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ, ಬಿಸಿಸಿಐಯಿಂದ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ. 

ಇನ್ನು ಮೂರು ಅಥವಾ ನಾಲ್ಕು ದಿನಗಳ ಒಳಗಾಗಿ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಅವರು ಆಸ್ಟ್ರೇಲಿಯಾ ವಿಮಾನ ಹತ್ತದೇ ಇದ್ದಲ್ಲಿ ಟೆಸ್ಟ್ ಸರಣಿಯನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆಂದು ಇತ್ತೀಚೆಗೆ ರವಿಶಾಸ್ತ್ರಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.