ಕ್ರಿಕೆಟ್

ಐಪಿಎಲ್ 2020: ಸ್ಲೆಡ್ಜ್ ಮಾಡಿದ್ದ ಕೊಹ್ಲಿಗೆ ಕ್ಷಣದಲ್ಲೇ ತಿರುಗೇಟು ಕೊಟ್ಟ ಮನೀಶ್ ಪಾಂಡೆ, ವಿಡಿಯೋ ವೈರಲ್!

2020ರ ಐಪಿಎಲ್ ಎಲಿಮಿನೆಟರ್ ಪಂದ್ಯದಲ್ಲಿ ನಾಯಕ ನೇತೃತ್ವದ ಆರ್ ಸಿಬಿ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಇದೇ ಪಂದ್ಯದಲ್ಲಿ ಮನೀಷ್ ಪಾಂಡೆಯನ್ನು ಸ್ಲೆಡ್ಜ್ ಮಾಡಿದ್ದು ಅದಕ್ಕೆ ಪಾಂಡೆ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.

ಐಪಿಎಲ್ 2020: ಸ್ಲೆಡ್ಜ್ ಮಾಡಿದ್ದ ಕೊಹ್ಲಿಗೆ ಕ್ಷಣದಲ್ಲೇ ತಿರುಗೇಟು ಕೊಟ್ಟ ಮನೀಶ್ ಪಾಂಡೆ, ವಿಡಿಯೋ ವೈರಲ್!
ಕೊಹ್ಲಿ-ಮನೀಶ್
Published On :

ದುಬೈ: 2020ರ ಐಪಿಎಲ್ ಎಲಿಮಿನೆಟರ್ ಪಂದ್ಯದಲ್ಲಿ ನಾಯಕ ನೇತೃತ್ವದ ಆರ್ ಸಿಬಿ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಇದೇ ಪಂದ್ಯದಲ್ಲಿ ಮನೀಷ್ ಪಾಂಡೆಯನ್ನು ಸ್ಲೆಡ್ಜ್ ಮಾಡಿದ್ದು ಅದಕ್ಕೆ ಪಾಂಡೆ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ. 

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 6 ವಿಕೆಟ್ ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಮನೀಶ್ ಪಾಂಡೆ ಅವರನ್ನು ಸ್ಲೆಡ್ಜ್ ಮಾಡಲು ಹೋಗಿ ಮುಖಭಂಗ ಅನುಭವಿಸಿದರು. ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಪಾಂಡೆ ರನ್ ಪೇರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಕೊಹ್ಲಿ ಇವತ್ತು ಇವನ ಆಟ ನಡೆಯಲ್ಲ, ಇವನ ಬ್ಯಾಟ್ ನಿಂದ ಯಾವುದೇ ಶಾಟ್ ಬರಲ್ಲ ಎಂದು ಗೇಲಿ ಮಾಡಿದ್ದರು. 

ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ಪಾಂಡೆ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಇದನ್ನು ನೋಡಿದ ಕೊಹ್ಲಿ ಬಾಯಿ ಮೇಲೆ ಕೈಯಿಟ್ಟು ಸುಮ್ಮನಾದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.