ಕ್ರಿಕೆಟ್

ಐಪಿಎಲ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಡೇವಿಡ್ ವಾರ್ನರ್, ಕೊಹ್ಲಿ ದಾಖಲೆ ಪುಡಿ ಪುಡಿ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನೂತನ ದಾಖಲೆಗಳು ನಿರ್ಮಾಣವಾಗುತ್ತಿರುತ್ತವೆ. ಅದೇ ರೀತಿ ಆ ದಾಖಲೆಗಳನ್ನು ಮತ್ತೊಬ್ಬರು ಮುರಿಯುವುದು ಸಹಜ. ಇದೀಗ ಕೊಹ್ಲಿಯ ದಾಖಲೆಯೊಂದನ್ನು ಡೇವಿಡ್ ವಾರ್ನರ್ ಪುಡಿಗಟ್ಟಿದ್ದಾರೆ.

ಐಪಿಎಲ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಡೇವಿಡ್ ವಾರ್ನರ್, ಕೊಹ್ಲಿ ದಾಖಲೆ ಪುಡಿ ಪುಡಿ!
ವಾರ್ನರ್-ಕೊಹ್ಲಿ
Published On :

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನೂತನ ದಾಖಲೆಗಳು ನಿರ್ಮಾಣವಾಗುತ್ತಿರುತ್ತವೆ. ಅದೇ ರೀತಿ ಆ ದಾಖಲೆಗಳನ್ನು ಮತ್ತೊಬ್ಬರು ಮುರಿಯುವುದು ಸಹಜ. ಇದೀಗ ಕೊಹ್ಲಿಯ ದಾಖಲೆಯೊಂದನ್ನು ಡೇವಿಡ್ ವಾರ್ನರ್ ಪುಡಿಗಟ್ಟಿದ್ದಾರೆ.

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಭರ್ಬರಿ ಬ್ಯಾಟಿಂಗ್ ಮಾಡಿದ್ದು 500ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. 

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ 6ನೇ ಬಾರಿಗೆ 500 ಪ್ಲಸ್ ರನ್ ಕಲೆ ಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಐಪಿಎಲ್ ಒಟ್ಟಾರೆ ಆವೃತ್ತಿಯಲ್ಲಿ 5 ಬಾರಿ 500 ಪ್ಲಸ್ ರನ್ ಬಾರಿಸಿದ್ದರು.

2020ರ ಐಪಿಎಲ್ ಟೂರ್ನಿಯಲ್ಲೂ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದು 14 ಪಂದ್ಯಗಳಿಂದ 460 ರನ್ ಗಳಿಸಿದ್ದಾರೆ. ಇನ್ನು 40 ರನ್ ಗಳಿಸಿದರೆ ವಾರ್ನರ್ ಸಮಕ್ಕೆ ನಿಲ್ಲಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.