ಕ್ರಿಕೆಟ್

ವಿರಾಟ್ ಕೊಹ್ಲಿಗಿಂತಲೂ ಬಾಬರ್‌ ಬೆಸ್ಟ್‌ ಬ್ಯಾಟ್ಸ್‌ಮನ್‌: ಆದಿಲ್ ರಶೀದ್‌

ಇತ್ತೀಚೆಗಷ್ಟೇ ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕನಾಗಿ ಹೊರಹೊಮ್ಮಿರುವ ಯುವ ಪ್ರತಿಭೆ ಬಾಬರ್‌ ಆಜಮ್, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗಿಂತಲೂ ಉತ್ತಮ ಬ್ಯಾಟ್ಸ್‌ಮನ್‌ ಎಂದು ಇಂಗ್ಲೆಂಡ್‌ನ ಅನುಭವಿ ಲೆಗ್‌ ಸ್ಪಿನ್ನರ್‌ ಆದಿಲ್‌ ರಶೀದ್‌ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿಗಿಂತಲೂ ಬಾಬರ್‌ ಬೆಸ್ಟ್‌ ಬ್ಯಾಟ್ಸ್‌ಮನ್‌: ಆದಿಲ್ ರಶೀದ್‌
ವಿರಾಟ್ ಕೊಹ್ಲಿ
Published On :

ನವದೆಹಲಿ: ಇತ್ತೀಚೆಗಷ್ಟೇ ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕನಾಗಿ ಹೊರಹೊಮ್ಮಿರುವ ಯುವ ಪ್ರತಿಭೆ ಬಾಬರ್‌ ಆಜಮ್, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗಿಂತಲೂ ಉತ್ತಮ ಬ್ಯಾಟ್ಸ್‌ಮನ್‌ ಎಂದು ಇಂಗ್ಲೆಂಡ್‌ನ ಅನುಭವಿ ಲೆಗ್‌ ಸ್ಪಿನ್ನರ್‌ ಆದಿಲ್‌ ರಶೀದ್‌ ಅಭಿಪ್ರಾಯಪಟ್ಟಿದ್ದಾರೆ.

ಕ್ರೀಸ್‌ ಟಿವಿ ಎಂಬ ಖಾಸಗಿ ಟೆಲಿವಿಷನ್‌ ಚಾನಲ್‌ ಒಂದಕ್ಕೆ ನೀಡಿರುವ ಸಂದರ್ಶನದ ವೇಳೆ ಕೊಹ್ಲಿ ಮತ್ತು ಬಾಬರ್‌ ಅವರಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಯ್ಕೆ ಮಾಡುವಂತೆ ರಶೀದ್‌ ಅವರನ್ನು ಕೇಳಲಾಗಿತ್ತು. ಇದಕ್ಕೆ ಸದ್ಯದ ಪ್ರದರ್ಶನ‌ವನ್ನು ಗಮನದಲ್ಲಿರಿಸಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಉತ್ತಮ ಎಂದಿದ್ದಾರೆ.

"ಇದು ಅತ್ಯಂತ ಕಠಿಣ ಪ್ರಶ್ನೆ. ಆದರೆ ಸದ್ಯದ ಫಾರ್ಮ್‌ ಗಮನಿಸಿ ಹೇಳುವುದಾದರೆ ಬಾಬರ್‌ ಆಜಮ್‌ ನನ್ನ ಆಯ್ಕೆ. ಅವರು ಉತ್ತಮ ಲಯದಲ್ಲಿ ಇದ್ದಾರೆ. ಹೀಗಾಗಿ ಅವರ ಹೆಸರನ್ನೇ ತೆಗೆದುಕೊಳ್ಳುತ್ತೇನೆ. ಅಂದಹಾಗೆ ಇಬ್ಬರೂ ಕೂಡ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು," ಎಂದು 2019ರ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್ ತಂಡದ ಸದಸ್ಯ ರಶೀದ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.