ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ
ಕೊರೊನಾ ವೈರಸ್ ಕೋವಿಡ್ -19 ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2021 ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.

ನವದೆಹಲಿ: ಕೊರೊನಾ ವೈರಸ್ ಕೋವಿಡ್ -19 ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2021 ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.
ಈ ಅರ್ಹತಾ ಪಂದ್ಯಗಳು ಜುಲೈನಲ್ಲಿ ನಡೆಯಬೇಕಿತ್ತು. ಐಸಿಸಿ ಮಂಗಳವಾರ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಜುಲೈ 3–19 ರಿಂದ ಶ್ರೀಲಂಕಾದಲ್ಲಿ ಮಹಿಳಾ ಅರ್ಹತಾ ಪಂದ್ಯಗಳು ನಡೆಯಬೇಕಿತ್ತು. ಇಲ್ಲಿ ಜಯ ಸಾಧಿಸಿದ ತಂಡಗಳು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2021 ರ ಪಂದ್ಯಾವಳಿಗೆ ಅರ್ಹತೆ ಪಡೆಯಲಿದ್ದವು.
19 ವರ್ಷದೊಳಗಿನವರ ವಿಶ್ವಕಪ್‌ನ ಯುರೋಪಿಯನ್ ಪ್ರಾದೇಶಿಕ ಅರ್ಹತಾ ಪಂದ್ಯವು ಡೆನ್ಮಾರ್ಕ್‌ನಲ್ಲಿ ಜುಲೈ 24 ರಿಂದ 30 ರವರೆಗೆ ನಡೆಯಬೇಕಿತ್ತು. ಈ ಪಂದ್ಯಗಳನ್ನೂ ಸಹ ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


