ಎಂಎಸ್ ಧೋನಿ ನನ್ನ ಮೆಂಟರ್: ರಿಷಬ್ ಪಂತ್
ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಮಾಜಿ ನಾಯಕ ಎಂಎಂಸ್ ಧೋನಿ ಅವರು ನನಗೆ ಮಾರ್ಗದರ್ಶಕರಿದ್ದಂತೆ, ಸಮಸ್ಯೆಗಳೊಂದಿಗೆ ಅವರು ಮುಕ್ತವಾಗಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಮಾಜಿ ನಾಯಕ ಎಂಎಂಸ್ ಧೋನಿ ಅವರು ನನಗೆ ಮಾರ್ಗದರ್ಶಕರಿದ್ದಂತೆ, ಸಮಸ್ಯೆಗಳೊಂದಿಗೆ ಅವರು ಮುಕ್ತವಾಗಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಧೋನಿ ನನಗೆ ಮೈದಾನದಲ್ಲಿ ಮತ್ತು ಹೊರಗೆ ಮಾರ್ಗದರ್ಶಕರಂತೆ ಇದ್ದಾರೆ. ನಾನು ಎದುರಿಸುತ್ತಿರುವ ಯಾವುದೇ ಸಮಸ್ಯೆಯೊಂದಿಗೆ ನಾನು ಅವರನ್ನು ಮುಕ್ತವಾಗಿ ಸಂಪರ್ಕಿಸಬಹುದು ಎಂದರು. ಆದರೆ ಯಾವುದೇ ಸಮಸ್ಯೆಗೂ ಪರಿಪೂರ್ಣ ಪರಿಹಾರವನ್ನು ಎಂದಿಗೂ ನೀಡುವುದಿಲ್ಲ ಎಂದು ಪಂತ್ ಹೇಳಿದ್ದಾರೆ.
ನಾನು ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗದಿರಲು ಇದು ಕಾರಣವಾಗಿದೆ, ಅವರು ನನಗೆ ಸುಳಿವುಗಳನ್ನು ನೀಡುತ್ತಾರೆ. ಅದು ಸಮಸ್ಯೆಯನ್ನು ನಾನೇ ಪರಿಹರಿಸಲು ಸಹಾಯ ಮಾಡುತ್ತದೆ. ಅವರು ನನ್ನ ನೆಚ್ಚಿನ ಬ್ಯಾಟಿಂಗ್ ಪಾಟ್ನರ್ ಎಂದು ಹೇಳಿದ್ದಾರೆ.
"ಮಹಿ ಭಾಯ್ ಕ್ರೀಸ್‌ನಲ್ಲಿದ್ದರೆ, ಅವರ ತಲೆಯಲ್ಲಿ ಯೋಜನೆಗಳು ಓಡುತ್ತಿರುವುತ್ತವೆ ಅವುಗಳನ್ನು ನಾವು ನಿಭಾಯಿಸಬೇಕು ಅಥವಾ ಅನುಸರಿಸಬೇಕು ಎಂದು ಹೇಳಿದರು.
ಆಡಮ್ ಗಿಲ್‌ಕ್ರಿಸ್ಟ್ ಮತ್ತು ಧೋನಿ ಅವರನ್ನು ಜೀವನದುದ್ದಕ್ಕೂ ಆರಾಧಿಸುತ್ತನೆ, ಜೊತೆಗೆ ನನ್ನದೆ ನೈಜ್ಯ ಆಟವನ್ನು ಪ್ರದರ್ಶಿಸುತ್ತೇನೆ. ಅವರಿಬ್ಬ ನನ್ನ ನೈಜ್ಯ ಆಟವನ್ನು ಒಪ್ಪಿಕೊಂಡಿದ್ದಾರೆ ಎಂದು ನಾನು ಹೆಮ್ಮೆಪಡುತ್ತೇನೆ" ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


