ಐಸಿಸಿ ರ್ಯಾಂಕಿಂಗ್: 2016ರಿಂದ ಮೊದಲ ಬಾರಿಗೆ ಅಗ್ರ ಸ್ಥಾನವನ್ನು ಕಳೆದುಕೊಂಡ ಭಾರತ, ಟೆಸ್ಟ್, ಟಿ-20 ಅಗ್ರ ಪಟ್ಟವೇರಿದ ಆಸ್ಟ್ರೇಲಿಯಾ
ಐಸಿಸಿ ಬಿಡುಗಡೆಗೊಳಿಸಿದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೆಸ್ಟ್ ಮತ್ತು ಟಿ 20 ಐ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಉಳಿಸಿಕೊಂಡಿದೆ. ಟೆಸ್ಟ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದ್ದು ಆಸ್ಟ್ರೇಲಿಯಾ (116) ಭಾರತದಿಂದ ಅಗ್ರ ಪಟ್ಟ ಕಸಿದುಕೊಂಡಿದೆ. ಇದರೊಡನೆ ಭಾರತ 2016ರ ನಂತರ ಮೊಟ್ಟ ಮೊದ

ದುಬೈ:ಐಸಿಸಿ ಬಿಡುಗಡೆಗೊಳಿಸಿದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೆಸ್ಟ್ ಮತ್ತು ಟಿ 20 ಐ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಉಳಿಸಿಕೊಂಡಿದೆ. ಟೆಸ್ಟ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದ್ದು ಆಸ್ಟ್ರೇಲಿಯಾ (116) ಭಾರತದಿಂದ ಅಗ್ರ ಪಟ್ಟ ಕಸಿದುಕೊಂಡಿದೆ. ಇದರೊಡನೆ ಭಾರತ 2016ರ ನಂತರ ಮೊಟ್ಟ ಮೊದಲ ಬಾರಿಗೆ ಅಗ್ರಸ್ಥಾನ ವಂಚಿತವಾಗಿದೆ.
ಇನ್ನು ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ (115) ಎರಡನೇ ಸ್ಥಾನದಲ್ಲಿದೆ. ಭಾರತ ಈಗ 114 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಕೇವಲ ಎರಡು ಪಾಯಿಂಟ್ ವ್ಯತ್ಯಾಸದಿಂದ ಭಾರತ ಅಗ್ರಪಟ್ಟ ವಂಚಿತವಾಗಿದೆ. 2003 ರಲ್ಲಿ ಟೆಸ್ಟ್ ಶ್ರೇಯಾಂಕ ಪ್ರಾರಂಭಿಸಿದಂದಿನಿಂದ ಅಗ್ರ ಮೂರು ತಂಡಗಳು ಇಷ್ಟು ಕಡಿಮೆ ಅಂಕಗಳ ಅಂತರದಲ್ಲಿ ಸ್ಥಾನಗಳನ್ನು ಹಂಚಿಕೊಂಡಿವೆ.
ಜನವರಿ 2016ರಲ್ಲಿ ಭಾರತ ಅಗ್ರಸ್ಥಾನ ಹೊಂದಿದ್ದಾಗಲೂ ಕೇವಲ ಒಂದೇ ಅಂಕಗಳ ಅಂತರದಲ್ಲಿ ಆಸ್ಟ್ರೇಲಿಯಾ ಎರಡನೇ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದವು.
ಐಸಿಸಿ ಪುರುಷರ ಏಕದಿನ ತಂಡದ ಶ್ರೇಯಾಂಕದಲ್ಲಿ, ವಿಶ್ವ ಚಾಂಪಿಯನ್ ಇಂಗ್ಲೆಂಡ್ (127) ಭಾರತದ ವಿರುದ್ಧ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದೆ. ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ,
2011 ರಲ್ಲಿ ಟಿ 20 ಐ ಶ್ರೇಯಾಂಕವನ್ನು ಪರಿಚಯಿಸಿದ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ (278) ಅಗ್ರಸ್ಥಾನಲ್ಲೇರಿದ್ದು 268 ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್ ಎರಡನೇಭಾರತ ಕೇವಲ ಎರಡು ಪಾಯಿಂಟ್‌ಗಳ ಹಿಂದಿದ್ದು ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ 260 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಟೆಸ್ಟ್ ರ್ಯಾಂಕಿಂಗ್
ಆಸ್ಟ್ರೇಲಿಯಾ-116 ಅಂಕ
ನ್ಯೂಜಿಲೆಂಡ್-115 ಅಂಕ
ಭಾರತ-114 ಅಂಕ
ಏಕದಿನ ರ್ಯಾಂಕಿಂಗ್
ಇಂಗ್ಲೆಂಡ್-127 ಅಂಕ
ಭಾರತ-119 ಅಂಕ
ನ್ಯೂಜಿಲೆಂಡ್-116 ಅಂಕ
ಟಿ-20 ರ್ಯಾಂಕಿಂಗ್
ಆಸ್ಟ್ರೇಲಿಯಾ-278 ಅಂಕ
ಇಂಗ್ಲೆಂಡ್-268 ಅಂಕ
ಭಾರತ-266 ಅಂಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


