ಕ್ರಿಕೆಟ್

ಕೊರೋನಾ: ಹೊಸ ಹಾಡು ರಚಿಸಿದ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ!

ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟೈಲಿಸ್ಟ್‌ ಆಲ್‌ರೌಂಡರ್‌ ಡ್ವೆನ್‌ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್ ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಕೊರೋನಾ: ಹೊಸ ಹಾಡು ರಚಿಸಿದ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ!
ಡ್ವೆನ್‌ ಬ್ರಾವೋ
Published On :

ನವದೆಹಲಿ: ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟೈಲಿಸ್ಟ್‌ ಆಲ್‌ರೌಂಡರ್‌ ಡ್ವೆನ್‌ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್  ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಡಿಜೆ ಬ್ರಾವೊ ಎಂದೇ ಕರೆಸಿಕೊಳ್ಳುವ ವೆಸ್ಟ್‌ ಇಂಡೀಸ್‌ನ ಈ ಆಟಗಾರ ರಾಪ್‌ ಹಾಡುಗಳನ್ನು ನಿರ್ಮಿಸುವುದರಲ್ಲಿ ನಿಸ್ಸೀಮರು. ಇದೀಗ ಅವರು ಕೊರೊನಾದಿಂದ ವಿಶ್ವವೇ ತಲ್ಲಣಗೊಂಡಿರುವ ಸಂದರ್ಭದಲ್ಲಿ ಅದರ ಬಗ್ಗೆಯೇ ಹಾಡು ರಚಿಸಿ ಹಾಡಿದ್ದಾರೆ. 

3 ನಿಮಿಷ 31 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ನಿತ್ಯ ಕೈಗಳನ್ನು ತೊಳೆದುಕೊಳ್ಳುವುದು, ಮನೆಯಲ್ಲಿಯೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಅಗತ್ಯ ಮುಂಜಾಗ್ರತಾ ಕ್ರಮಗಳ ಮೂಲಕ ಕೊರೋನಾವೈರಸ್ ವಿರುದ್ಧ ಹೋರಾಡುವಂತೆ ಜನತೆಯಲ್ಲಿ ಬ್ರಾವೋ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.