ಕ್ರಿಕೆಟ್

ಮೊದಲು ಐಪಿಎಲ್ ಆಡುವುದರ ಮೇಲೆ ಗಮನ: ಡಿವಿಲಿಯರ್ಸ್‌

ಕ್ರೀಡಾಲೋಕಕ್ಕೆ ಮುಳುವಾಗಿರುವ ಕರೋನಾ ಭೀತಿಯ ನಡುವೆಯೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್‌ ನಿವೃತ್ತಿ ನಂತರ ಮತ್ತೊಮ್ಮೆ ತಂಡಕ್ಕೆ ಮರಳುತ್ತಾರಾ? ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ.

ಮೊದಲು ಐಪಿಎಲ್ ಆಡುವುದರ ಮೇಲೆ ಗಮನ: ಡಿವಿಲಿಯರ್ಸ್‌
ಡಿವಿಲಿಯರ್ಸ್‌
Published On :

ನವದೆಹಲಿ: ಕ್ರೀಡಾಲೋಕಕ್ಕೆ  ಮುಳುವಾಗಿರುವ ಕರೋನಾ ಭೀತಿಯ ನಡುವೆಯೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ನಿವೃತ್ತಿ ನಂತರ ಮತ್ತೊಮ್ಮೆ ತಂಡಕ್ಕೆ ಮರಳುತ್ತಾರಾ? ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. 

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿಲಿಯರ್ಸ್‌ ತಂಡಕ್ಕೆೆ ಮರಳಿದ್ದೇ ಆದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ. ಆದರೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ, ಸದ್ಯದ ಗಮನವೆಲ್ಲ ಐಪಿಎಲ್ ಮೇಲೆ ಕೇಂದ್ರಿಕೃತವಾಗಿದೆ.ಇದಾದ ಬಳಿಕ ಭವಿಷ್ಯದ ಬಗ್ಗೆ ಯೋಚಿಸುವುದಾಗಿ ಹೇಳಿಕೆ ನೀಡುವ ಮೂಲಕ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಖಾಸಗಿ ಸುದ್ದಿಸಂಸ್ಥೆೆಗೆ ನೀಡಿರುವ ಸಂದರ್ಶನದಲ್ಲಿ ಭವಿಷ್ಯದ ಬಗ್ಗೆ ಮಾತನಾಡಿರುವ ಮಿ.360, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ತಮ್ಮ ಪ್ರದರ್ಶನದ ನಂತರವಷ್ಟೇ ತಂಡಕ್ಕೆ ಮರಳುವ ವಿಷಯವನ್ನು ಆಲೋಚಿಸುತ್ತೇನೆ. ರಾಯಲ್ ಚಾಲೆಂಜರ್‌ಸ್‌ ಬೆಂಗಳೂರು ತಂಡ ನಮ್ಮ ಸಾಮರ್ಥ್ಯವನ್ನು ಅರಿತು ಉತ್ತಮ ವೇದಿಕೆ ಕಲ್ಪಿಸಿದೆ. ಇದಾದ ಬಳಿಕ ಕೂತು ಚರ್ಚಿಸಿ ಮುಂದಿನ ತೀರ್ಮಾನ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.