ಮೊದಲ ನೋಟದಲ್ಲೇ ಪ್ರೇಮಾಂಕುರವಾದ ಬಗ್ಗೆ ಇಶಾಂತ್ ಮಾತು
2011ರಲ್ಲಿ ದೆಹಲಿಯಲ್ಲಿ ಬ್ಯಾಸ್ಕೆಟ್‌ಬಾಲ್ ಟೂರ್ನಿಗೆ ಅತಿಥಿಯಾಗಿ ಹೋಗಿದ್ದ ಇಶಾಂತ್ ಶರ್ಮಾ, ಮೊಟ್ಟ ಮೊದಲ ಬಾರಿ ಪ್ರತಿಮಾ ಅವರನ್ನು ನೋಡಿ ಇಷ್ಟಪಟ್ಟಿದ್ದರು. ಆ ಕ್ಷಣದಲ್ಲಿಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು.

ನವದೆಹಲಿ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಹಾರ್ದಿಕ್ ಪಾಂಡ್ಯ-ನತಾಶ ಸ್ಟ್ಯಾನ್‌ಕೋವಿಚ್ ಅವರು ಪ್ರೇಮ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ. ಆದರೆ, ಟೀಮ್ ಇಂಡಿಯಾ ಹಿರಿಯ ವೇಗಿ ಇಶಾಂತ್ ಶರ್ಮಾ ಅವರದೂ ಕೂಡ ಲವ್ ಮ್ಯಾರೇಜ್ ಎಂದು ಇನ್ನೂ ಸಾಕಷ್ಟು ಮಂದಿಗೆ ತಿಳಿದೇ ಇಲ್ಲ.
ವೇಗಿ ಇಶಾಂತ್ ಶರ್ಮಾ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಎಂಬುವವರನ್ನು 2016ರಲ್ಲಿ ವಿವಾಹವಾಗಿದ್ದರು. 2011ರಲ್ಲಿ ದೆಹಲಿಯಲ್ಲಿ ಬ್ಯಾಸ್ಕೆಟ್‌ಬಾಲ್ ಟೂರ್ನಿಗೆ ಅತಿಥಿಯಾಗಿ ಹೋಗಿದ್ದ ಇಶಾಂತ್ ಶರ್ಮಾ, ಮೊಟ್ಟ ಮೊದಲ ಬಾರಿ ಪ್ರತಿಮಾ ಅವರನ್ನು ನೋಡಿ ಇಷ್ಟಪಟ್ಟಿದ್ದರು. ಆ ಕ್ಷಣದಲ್ಲಿಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು.
ನನ್ನ ಸ್ನೇಹಿತ ಆಯೋಜನೆ ಮಾಡಿದ್ದ ಬ್ಯಾಸ್ಕೆಟ್‌ಬಾಲ್ ಟೂರ್ನಿಗೆ ಮುಖ್ಯ ಅತಿಥಿಯಾಗಿ ನಾನು ಭಾಗವಹಿಸಿದ್ದೆ. ನನ್ನ ಜೀವನದಲ್ಲಿ ಮೊದಲ ಬಾರಿ ಲವ್ ಅಟ್ ಫಸ್ಟ್ ಸೈಟ್ ಆಯ್ತು. ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಅವರನ್ನು ಮೊದಲ ಬಾರಿ ನೋಡಿದಾಗಲೇ ಮದುವೆಯಾದರೇ ಈಕೆಯನ್ನೇ ಆಗಬೇಕು ಎಂದು ಆ ಕ್ಷಣವೇ ನಿರ್ಧಾರ ಮಾಡಿದೆ,'' ಎಂದು ಇಶಾಂತ್ ಶರ್ಮಾ ಕ್ರಿಕ್‌ಬಜ್ ಹೊಸ ಕಾರ್ಯಕ್ರಮ ಸ್ಪೈಸಿ ಪಿಚ್‌ನಲ್ಲಿ ತಮ್ಮ ಪ್ರೇಮ ಕಥೆಯನ್ನು ಹೇಳಿಕೊಂಡರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


