ರಣಜಿ ಸೆಮಿಫೈನಲ್ಸ್: ರೋಚಕ ಘಟ್ಟದತ್ತ ಕರ್ನಾಟಕ-ಬಂಗಾಳ ಪಂದ್ಯ
ಕರ್ನಾಟಕ ಹಾಗೂ ಬಂಗಾಳ ನಡುವಿನ ರಣಜಿ ಟೂರ್ನಿಯ ಸೆಮಿಫೈನಲ್ಸ್ ಪಂದ್ಯ ರೋಚಕತೆಯತ್ತ ಮುಖ ಮಾಡಿದೆ.

ಕೋಲ್ಕತಾ: ಕರ್ನಾಟಕ ಹಾಗೂ ಬಂಗಾಳ ನಡುವಿನ ರಣಜಿ ಟೂರ್ನಿಯ ಸೆಮಿಫೈನಲ್ಸ್ ಪಂದ್ಯ ರೋಚಕತೆಯತ್ತ ಮುಖ ಮಾಡಿದೆ.
ಸೋಮವಾರ 4 ವಿಕೆಟ್ ಗೆ 72 ರನ್ ಗಳಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಂಗಾಳ 161 ರನ್ ಗಳಿಗೆ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಸುದೀಪ್ ಚಟರ್ಜಿ 45 ರನ್ ಬಾರಿಸಿದರೆ, ಶ್ರೀವತ್ಸ ಗೋಸ್ವಾಮಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಏಳನೇ ವಿಕೆಟ್ ಗೆ ಶಹಬಾಜ್ ಅಹ್ಮದ್ ಹಾಗೂ ಅನುಸ್ತುಪ್ ಮುಜುಂದಾರ್ ಅರ್ಧಶತಕ ಜೊತೆಯಾಟವನ್ನು ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ಮುಜುಂದಾರ್ 108 ಎಸೆತಗಳಲ್ಲಿ 41 ರನ್ ಬಾರಿಸಿದರು. ಶಹಬಾಜ್ ಅಹ್ಮದ್ 31 ರನ್ ಸಿಡಿಸಿದರು.
ವೇಗದ ಬೌಲರ್ ಅಭಿಮನ್ಯು ಮಿಥುನ್ 4, ಕೆ.ಗೌತಮ್ 3, ರೋನಿತ್ ಮೋರೆ 2 ವಿಕೆಟ್ ಕಬಳಿಸಿದರು. ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭಿಕ ಆಘಾತಕ್ಕೆ ಒಳಗಾಯಿತು. ಕೆ.ಎಲ್ ರಾಹುಲ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರ್.ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ಆರಂಭಿಕ ಆಟಗಾರ ಸಮರ್ಥ್ 2 ಬೌಂಡರಿ ಸಹಾಯದಿಂದ 27 ರನ್ ಸೇರಿಸಿದರು.
ದೇವದತ್ ಪಡಿಕ್ಕಲ್ 109 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ ಅಜೇಯ 50 ಸಿಡಿಸಿದರು. ಕರುಣ್ ನಾಯರ್ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮನೀಷ್ ಪಾಂಡೆ (ಅಜೇಯ 11) ಹಾಗೂ ದೇವದತ್ ಜೋಡಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕರ್ನಾಟಕದ ದಿನದಾಟದಂತ್ಯಕ್ಕೆ ಮೂರು ವಿಕೆಟ್ ಗೆ 98 ರನ್ ಕಲೆ ಹಾಕಿದೆ. ಕರ್ನಾಟಕ ಫೈನಲ್ ಪಂದ್ಯಕ್ಕೆ ಪ್ರವೇಶಿಸಲು ಇನ್ನು 254 ರನ್ ಗಳ ಅವಶ್ಯಕತೆ ಇದೆ.
It's Stumps on Day 3 of the #BENvKAR @paytm #RanjiTrophy semifinal in Kolkata.
Scorecard
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


