ಕ್ರಿಕೆಟ್

ಈ ವಾರದಿಂದ 2023 ಐಸಿಸಿ ವಿಶ್ವಕಪ್ ಅರ್ಹತಾ ಏಕದಿನ ಸೂಪರ್ ಲೀಗ್ ಆರಂಭ

2023 ರ ವಿಶ್ವಕಪ್ ಗೆ ಅರ್ಹತೆಯನ್ನು ನೀಡುವ ಏಕದಿನ ಸೂಪರ್ ಲೀಗ್ ಪಂದ್ಯಾವಳಿ ಈ ವಾರದಿಂದ ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಖಚಿತಪಡಿಸಿದೆ.

ಈ ವಾರದಿಂದ 2023 ಐಸಿಸಿ ವಿಶ್ವಕಪ್ ಅರ್ಹತಾ ಏಕದಿನ ಸೂಪರ್ ಲೀಗ್ ಆರಂಭ
ಇಂಗ್ಲೆಂಡ್-ಐರ್ಲ್ಯಾಂಡ್ ತಂಡದ ಆಟಗಾರರು
Published On :

ಚೆನ್ನೈ: 2023 ರ ವಿಶ್ವಕಪ್ ಗೆ ಅರ್ಹತೆಯನ್ನು ನೀಡುವ ಏಕದಿನ ಸೂಪರ್ ಲೀಗ್ ಪಂದ್ಯಾವಳಿ ಈ ವಾರದಿಂದ ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಖಚಿತಪಡಿಸಿದೆ.

ಸೌತಾಂಪ್ಟನ್ ನಲ್ಲಿ ಜುಲೈ 30 ರಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಐರ್ಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯೊಂದಿಗೆ ಇದು ಆರಂಭವಾಗಲಿದೆ.

ವಾಸ್ತವವಾಗಿ ಮೇ ತಿಂಗಳಿನಿಂದ ಸೂಪರ್ ಲೀಗ್ ಆರಂಭವಾಗಬೇಕಿತ್ತು. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮೂರು ಸರಣಿಗಳು ಈಗಾಗಲೇ ರದ್ದಾಗಿವೆ. ಈ ವರ್ಷದಲ್ಲಿ ಸೂಪರ್ ಲೀಗ್ ಕಲ್ಪನೆಯನ್ನು ರದ್ದುಪಡಿಸಲು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ 50 ಓವರ್ ಗಳ ಸ್ವರೂಪಕ್ಕೆ ಮತ್ತಷ್ಟು ಅರ್ಥ ಬರುವಂತೆ ಮಾಡಲಾಗುತ್ತಿದ್ದು, ಎಂಟು ಅರ್ಹತಾ ತಂಡಗಳನ್ನು ಗುರುತಿಸಲು ಶ್ರೇಯಾಂಕ ಪದ್ಧತಿಯನ್ನು ಉಳಿಸಿಕೊಳ್ಳಲಾಗಿದೆ.

ಆದಾಗ್ಯೂ. 2023 ವಿಶ್ವಕಪ್ ನ್ನು ಫೆಬ್ರವರಿಯಿಂದ ಮಾರ್ಚ್ ನಿಂದ ಅಕ್ಟೋಬರ್ ನಿಂದ ನವೆಂಬರ್ ಗೆ ಸ್ಥಳಾಂತರಿಸಲು ಐಸಿಸಿ ನಿರ್ಧರಿಸಿದೆ. ಇದರಿಂದ ಕೋವಿಡ್-19 ಕಾರಣ ನಿಂತುಹೋದಂತಹ ಪಂದ್ಯಗಳನ್ನು ಆಡಿಸಲು ನಮಗೆ ಸಮಯಾವಕಾಶ ದೊರೆಯಲಿದೆ. ಅರ್ಹತಾ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಬಹುದು ಎಂದು ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲಾರ್ಡಿಸ್ ಹೇಳಿದ್ದಾರೆ.

ಕೆಲ ದೇಶಗಳಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸಿದರೆ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತದಂತಹ ಉಪ ಖಂಡಗಳಲ್ಲಿ ವೈರಸ್ ಪ್ರಮಾಣ ಹೆಚ್ಚಾಗಿದ್ದು, ಕ್ರಿಕೆಟ್ ಚಟುವಟಿಕೆಗಳು ಯಾವಾಗ ಆರಂಭವಾಗಲಿದೆ ಎಂದು ಹೇಳಲು ಆಗುತ್ತಿಲ್ಲ. ಆದಾಗ್ಯೂ, ಪಾಕಿಸ್ತಾನ ಈ ಪಂದ್ಯಗಳಲ್ಲಿ ತವರಿನಲ್ಲಿಯೇ ಆಡಲು ಎದುರು ನೋಡುತ್ತಿದೆ. ಇದೇ ಕಾರಣದಿಂದ ಐಸಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಇನ್ನೂ ಘೋಷಿಸಿಲ್ಲ.

ಟೆಸ್ಟ್ ಚಾಂಪಿಯನ್ ನಂತೆ ಭಾರತ ಮತ್ತು ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡುವ ಸಾಧ್ಯತೆ ಕಂಡುಬರುತ್ತಿಲ್ಲ. ಸೂಪರ್ ಲೀಗ್ ಅಡಿಯಲ್ಲಿ ಬಾಂಗ್ಲಾದೇಶ,ಐರ್ಲ್ಯಾಂಡ್ ನೆದರ್ ಲ್ಯಾಂಡ್ ವಿರುದ್ಧ ಭಾರತ ಯಾವುದೇ ಏಕದಿನ ಪಂದ್ಯಗಳನ್ನಾಡುತ್ತಿಲ್ಲ.ಆದಾಗ್ಯೂ, ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸ ಸಂದರ್ಭದಲ್ಲಿ ತಮ್ಮ ವಿರುದ್ಧ ಕೆಲ ಪಂದ್ಯಗಳನ್ನಾಡುವಂತೆ ಐರ್ಲ್ಯಾಂಡ್ ಮತ್ತು ಡಚ್ , ಬಿಸಿಸಿಐ ಬಳಿ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.