ಟೀಂ ಇಂಡಿಯಾದಲ್ಲಿ ವೇಗದ ಬೌಲರ್‌ಗಳೇ ಇರಲಿಲ್ಲ: ಕಪಿಲ್ ದೇವ್
ಭಾರತ ತಂಡ ಸದ್ಯ ವಿಶ್ವದ ನಂ.1 ಬೌಲಿಂಗ್ ವಿಭಾಗವನ್ನು ಹೊಂದಿದೆ. ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರನ್ನು ಒಳಗೊಂಡ ಭಾರತ ಟೆಸ್ಟ್ ತಂಡದ ಬೌಲಿಂಗ್ ವಿಭಾಗ ವಿಶ್ವದ ಯಾವುದೇ ತಂಡವನ್ನು ಅಲ್ಪ ಮೊತ್ತಕ್ಕೆ ಆಲ್‌ಔಟ್ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಪರಿಣತರ ಅಭಿಪ್ರಾಯವಾಗಿದೆ.

ನವದೆಹಲಿ: ಭಾರತ ತಂಡ ಸದ್ಯ ವಿಶ್ವದ ನಂ.1 ಬೌಲಿಂಗ್ ವಿಭಾಗವನ್ನು ಹೊಂದಿದೆ. ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರನ್ನು ಒಳಗೊಂಡ ಭಾರತ ಟೆಸ್ಟ್ ತಂಡದ ಬೌಲಿಂಗ್ ವಿಭಾಗ ವಿಶ್ವದ ಯಾವುದೇ ತಂಡವನ್ನು ಅಲ್ಪ ಮೊತ್ತಕ್ಕೆ ಆಲ್‌ಔಟ್ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಪರಿಣತರ ಅಭಿಪ್ರಾಯವಾಗಿದೆ.
ಆದರೆ, ಹಿಂದೆಲ್ಲಾ ಟೀಮ್ ಇಂಡಿಯಾದ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು. ಆಗ ಭಾರತ ತಂಡದಲ್ಲಿ ವಿಶ್ವ ಶ್ರೇಷ್ಠ ವೇಗಿಗಳು ಇಲ್ಲವೇ ಇಲ್ಲ ಎನ್ನಲಾಗುತ್ತಿತ್ತು. ಒಬ್ಬ ಬೌಲರ್‌ಗೂ ಭಾರತ ತಂಡದಲ್ಲಿ ವಿಶ್ವ ಶ್ರೇಷ್ಠ ಎನಿಸಿಕೊಳ್ಳು ಸಾಮರ್ಥ್ಯ ಇರಲಿಲ್ಲ ಎಂಬುದು ವಿಪರ್ಯಾಸವೇ ಸರಿ. ಹೀಗಾಗಿ ಹೆಚ್ಚು ಸ್ಪಿನ್ ಬೌಲರ್‌ಗಳನ್ನೇ ಭಾರತ ತಂಡ ಆಧರಿಸುವಂತಾಗಿತ್ತು.
1970ರ ದಶಕದಲ್ಲಿ ಭಾರತ ತಂಡ ತನ್ನ ಬಲಿಷ್ಠ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲರ್‌ಗಳ ಬಲದಿಂದಲೇ ಹೆಚ್ಚು ಪಂದ್ಯಗಳನ್ನು ಗೆದ್ದಿತ್ತು. ಅಂದೆಲ್ಲಾ ಹೆಸರಿಗಷ್ಟೇ ಒಬ್ಬ ವೇಗದ ಬೌಲರ್‌ನನ್ನು ತಂಡದಲ್ಲಿ ಆಡಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಹರಿಯಾಣ ಹರಿಕೇನ್ ಪ್ರವೇಶವಾಗಿತ್ತು.
ವಿಶ್ವ ಶ್ರೇಷ್ಠ ಫಾಸ್ಟ್‌ಬೌಲಿಂಗ್ ಆಲ್‌ರೌಂಡರ್ ಆಗಿ ಹೊರಹೊಮ್ಮಿದ ಕಪಿಲ್ ದೇವ್ ಆ ಕಾಲಕ್ಕೆ ನ್ಯೂಜಿಲೆಂಡ್‌ನ ದಿಗ್ಗಜ ರಿಚರ್ಡ್ ಹ್ಯಾಡ್ಲಿ ಅವರ ಹೆಸರಲ್ಲಿದ್ದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಮುರಿದಿದ್ದರು. ಭಾರತ ಕೂಡ ವಿಶ್ವ ಶ್ರೇಷ್ಠ ಫಾಸ್ಟ್ ಬೌಲರ್‌ಗಳನ್ನು ತರಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದೆ ಕಪಿಲ್ ದೇವ್ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಗುಣಗಾನ ಮಾಡಿದ್ದರು.
ಈ ಬಗ್ಗೆ ತಮ್ಮ ನೆನಪಿನಾಳ ಕೆದಕಿರುವ ಭಾರತಕ್ಕೆ ಚೊಚ್ಚಲ (1983) ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್, ತಾವು ವೇಗದ ಬೌಲರ್ ಆಗಲೇ ಬೇಕೆಂದು ಹಠ ಹಿಡಿದದ್ದು ಯಾವಾಗ ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


