ಉಗುಳು ಬಳಕೆ ಇಲ್ಲದೆ ಪಾಕ್ ವೇಗಿಗಳು ಇಂಗ್ಲೆಂಡ್ ಪಿಚ್ಗಳಲ್ಲಿ ಪರದಾಡಲ್ಲಿದ್ದಾರೆ: ಜುನೇದ್ ಖಾನ್
ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಆಗಸ್ಟ್ನಲ್ಲಿ ತಲಾ ಮೂರು ಪಂದ್ಯಗಳ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಈ ಸಲುವಾಗಿ ಈಗಾಗಲೇ ಮ್ಯಾಂಚೆಸ್ಟರ್ನಲ್ಲಿ ಬೀಡುಬಿಟ್ಟಿರುವ ಪಾಕ್ ಪಡೆ 14 ದಿನಗಳ ಕ್ವಾರಂಟೈನ್ ಬಳಿಕ ಕಠಿಣ ಅಭ್ಯಾಸದಲ್ಲಿ ತೊಡಗಲಿದೆ.

ಕರಾಚಿ: ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಆಗಸ್ಟ್ನಲ್ಲಿ ತಲಾ ಮೂರು ಪಂದ್ಯಗಳ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಈ ಸಲುವಾಗಿ ಈಗಾಗಲೇ ಮ್ಯಾಂಚೆಸ್ಟರ್ನಲ್ಲಿ ಬೀಡುಬಿಟ್ಟಿರುವ ಪಾಕ್ ಪಡೆ 14 ದಿನಗಳ ಕ್ವಾರಂಟೈನ್ ಬಳಿಕ ಕಠಿಣ ಅಭ್ಯಾಸದಲ್ಲಿ ತೊಡಗಲಿದೆ.
ಅಂದಹಾಗೆ ಕೊರೊನಾ ವೈರಸ್ ಕಾರಣ ಕ್ರಿಕೆಟ್ನಲ್ಲಿ ಈಗ ಹಲವು ನಿಯಮಗಳನ್ನು ತರಲಾಗಿದೆ. ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಆಟಗಾರು ಚೆಂಡಿಗೆ ಹೊಳಪು ತರಲು ಯಾವುದೇ ಕಾರಣಕ್ಕೂ ಉಗುಳನ್ನು ಬಳಸಬಾರದು ಎಂದು ನಿಷೇಧ ಹೇರಲಾಗಿದೆ.
ಉಗುಳು ಬಳಕೆ ಮಾಡದೇ ಹೋದರೆ ಪಾಕ್ ವೇಗಿಗಳು ಇಂಗ್ಲೆಂಡ್ ಪಿಚ್ಗಳಲ್ಲಿ ಪರದಾಟ ನಡೆಸುವುದು ನಿಶ್ಚಿತ ಎಂದು ಅವಕಾಶ ವಂಚಿತ ಎಡಗೈ ವೇಗಿ ಜುನೇದ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದ 29 ಆಟಗಾರರ ಪಟ್ಟಿಯಲ್ಲಿ 29 ವರ್ಷದ ವೇಗದ ಬೌಲರ್ ಜುನೇದ್ಗೆ ಸ್ಥಾನ ಲಭ್ಯವಾಗಿರಲಿಲ್ಲ.
ಚೆಂಡಿಗೆ ಉಗುಳು ಹಚ್ಚುವುದು ನಿಷೇಧವಾಗಿರುವ ಕಾರಣ ಎರಡೂ ತಂಡಗಳು ರಿವರ್ಸ್ ಸ್ವಿಂಗ್ ತರುವಲ್ಲಿ ವಿಫಲವಾಗಲಿವೆ. ಆದರೆ, ಇಲ್ಲಿ ಪರದಾಟವು ನಮ್ಮ ಬೌಲರ್ಗಳಿಗೆ ಹೆಚ್ಚಿರುತ್ತದೆ. ಏಕೆಂದರೆ ಇಂಗ್ಲೆಂಡ್ ಬೌಲರ್ಗಳು ಸ್ವಿಂಗ್ ಬೌಲಿಂಗ್ ಅನ್ನು ಹೆಚ್ಚು ನೆಚ್ಚಿಕೊಂಡಿಲ್ಲ.
ಜೇಮ್ಸ್ ಆಂಡರ್ಸನ್ ಹೊಸ ಚೆಂಡಿನಲ್ಲಿ ಅದ್ಭುತವಾಗಿ ಎಸೆಯುತ್ತಾರೆ. ಆದರೆ ಅವರ ರಿವರ್ಸ್ ಸ್ವಿಂಗ್ ಅಷ್ಟೇನು ಪರಿಣಾಮಕಾರಿಯಲ್ಲ. ಅದೇ ರೀತಿ ಸ್ಟುವರ್ಟ್ ಬ್ರಾಡ್ ಮತ್ತು ಜೋಫ್ರ ಆರ್ಚರ್ ಅವರ ರಿವರ್ಸ್ ಸ್ವಿಂಗ್ ಕೂಡ ಅಷ್ಟು ಹೇಳಿಕೊಳ್ಳುವಂತಿಲ್ಲ," ಎಂದು ಸ್ಥಳೀಯ ವೆಬ್ಸೈಟ್ ಒಂದಕ್ಕೆ ಜುನೇದ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


