ಕ್ರಿಕೆಟ್

'ಭಗವಂತ ಕೃಷ್ಣ'ನನ್ನು ಕಂಡಷ್ಟೆ ಖುಷಿ ಆಯ್ತು, ಕೈಫ್ 'ಸುಧಾಮ' ಟ್ವೀಟ್ ವೈರಲ್!

ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೊತೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ತೆಗೆಸಿಕೊಂಡಿರುವ ಫೋಟೋವೊಂದು ಇದೀಗ ಸಖತ್ ವೈರಲ್ ಆಗಿದೆ.

'ಭಗವಂತ ಕೃಷ್ಣ'ನನ್ನು ಕಂಡಷ್ಟೆ ಖುಷಿ ಆಯ್ತು, ಕೈಫ್ 'ಸುಧಾಮ' ಟ್ವೀಟ್ ವೈರಲ್!
ಸಚಿನ್ ತೆಂಡೂಲ್ಕರ್-ಮೊಹಮ್ಮದ್ ಕೈಫ್
Published On :

ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೊತೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ತೆಗೆಸಿಕೊಂಡಿರುವ ಫೋಟೋವೊಂದು ಇದೀಗ ಸಖತ್ ವೈರಲ್ ಆಗಿದೆ. 

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜತೆಗಿನ ಫೋಟೋವನ್ನು ಟ್ವೀಟ್ ಮಾಡಿರುವ ಮೊಹಮ್ಮದ್ ಕೈಫ್ ಅವರು ಸಚಿನ್ ತೆಂಡೂಲ್ಕರ್(ಭಗವಂತ ಕೃಷ್ಣ) ಜೊತೆ ನಿಂತಾಗ ನನಗೆ ಸುಧಾಮನಂತೆ ಭಾಸವಾಯಿತು ಎಂದು ಟ್ವೀಟ್ ಮಾಡಿದ್ದು ಈ ಫೋಟೋಗೆ ಟ್ವೀಟರಿಗರು ಫಿದಾ ಆಗಿದ್ದಾರೆ. 

2002ರಿಂದ ಟೀಂ ಇಂಡಿಯಾ ಪರ ಆಡಿದ್ದ ಮೊಹಮ್ಮದ್ ಕೈಫ್ 2018ರಲ್ಲಿ ನಿವೃತ್ತಿ ಘೋಷಿಸಿದ್ದರು. ಟೀಂ ಇಂಡಿಯಾದ ಅತ್ಯುತ್ತಮ ಆಲ್ ರೌಂಡರ್ ಆಗಿದ್ದ ಕೈಫ್ ಹಲವು ಮಹತ್ವದ ಪಂದ್ಯಗಳಲ್ಲಿ ತಂಡದವನ್ನು ಗೆಲ್ಲಿಸಿಕೊಟ್ಟಿದ್ದರು. 

125 ಏಕದಿನ ಪಂದ್ಯಗಳಲ್ಲಿ ಆಡಿದ್ದ ಕೈಫ್ 32ರ ಸರಾಸರಿಯಲ್ಲಿ 2,753 ರನ್ ಬಾರಿಸಿದ್ದರು. 13 ಟೆಸ್ಟ್ ಪಂದ್ಯದಲ್ಲಿ 624 ರನ್ ಬಾರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.