ಮತ್ತೆ ಎಡವಿದ ವಿರಾಟ್: 10ನೇ ಬಾರಿ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನು ಕೊಂಚ ತಿದ್ದಿಕೊಂಡ ಭಾರತ, ನ್ಯೂಜಿಲೆಂಡ್ ವಿರುದ್ಧ 242 ರನ್ಗಳಿಗೆ ಆಲೌಟ್ ಆಯಿತಾದರೂ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿದ್ದಾರೆ.

ಕ್ರೈಸ್ಟ್ಚರ್ಚ್: ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನು ಕೊಂಚ ತಿದ್ದಿಕೊಂಡ ಭಾರತ, ನ್ಯೂಜಿಲೆಂಡ್ ವಿರುದ್ಧ 242 ರನ್ಗಳಿಗೆ ಆಲೌಟ್ ಆಯಿತಾದರೂ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವ ವಿರಾಟ್, ಎರಡನೇ ಪಂದ್ಯದ ಮೊದಲ ಇನಿಂಗ್ಸ್ನ ಮೊದಲನೇ ದಿನ ಕೇವಲ ಮೂರು ರನ್ಗಳಿಗೆ ಸೀಮಿತರಾದರು. ಟಿಮ್ ಸೌಥಿ ಎಸೆದ ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಪ್ಯಾಡ್ ಮೇಲೆ ಹಾಕಿಕೊಂಡರು.
ಮೊದಲ ದಿನದ ಪ್ರಥಮ ಅವಧಿಯಲ್ಲಿ ಡಿಆರ್ಎಸ್ ಪಡೆದಿದ್ದ ಮಯಾಂಕ್ ಅಗರ್ವಾಲ್ ಬಳಿಕ ನಾಯಕ ವಿರಾಟ್ ಕೊಹ್ಲಿಯೂ ಪಡೆದುಕೊಂಡಿದ್ದರು. ಸೌಥಿ ಎಸೆತದಲ್ಲಿ ಪ್ಯಾಡ್ ಮೇಲೆ ಚೆಂಡನ್ನು ಹಾಕಿಕೊಂಡಾಗ ಅಂಪೈರ್ ಔಟ್ ನೀಡಿದರು. ತೀರ್ಪು ಮರುಪರಿಶೀಲಿಸುವಂತೆ ಕೊಹ್ಲಿ ಡಿಆರ್ಎಸ್ ಮೊರೆ ಹೋದರು. ಆದರೆ, ಕೊಹ್ಲಿ ಕ್ಲೀನ್ ಪ್ಲಂಬ್ ಆಗಿರುವುದು ಮೂರನೇ ಅಂಪೈರ್ನಿಂದ ಸ್ಪಷ್ಟವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


