ಟಿ20 ವಿಶ್ವಕಪ್: ಟೀಂ ಇಂಡಿಯಾ ದಾಖಲೆ ಮುರಿದ ಆಫ್ರಿಕಾ ವನಿತೆಯರು
ಇಲ್ಲಿನ ಮನುಕಾ ಓವಲ್ ಅಂಗಳದಲ್ಲಿ ಲಿಜೆಲ್ಲಿ ಲೀ(101 ರನ್) ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 195 ರನ್ ದಾಖಲೆಯ ಮೊತ್ತ ಗಳಿಸಿದೆ. ಚುಟುಕು ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ.

ಕ್ಯಾನ್‌ಬೆರಾ: ಇಲ್ಲಿನ ಮನುಕಾ ಓವಲ್ ಅಂಗಳದಲ್ಲಿ ಲಿಜೆಲ್ಲಿ ಲೀ(101 ರನ್) ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 195 ರನ್ ದಾಖಲೆಯ ಮೊತ್ತ ಗಳಿಸಿದೆ. ಚುಟುಕು ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 195 ರನ್ ದಾಖಲಿಸಿತು. ಆ ಮೂಲಕ ಭಾರತದ ದಾಖಲೆಯನ್ನು ಆಫ್ರಿಕಾ ವನಿತೆಯರು ಮುರಿದರು. ಭಾರತ 2018ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 20 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೂರನೇ ಓವರ್ ನಲ್ಲಿ ಡೇನ್ ವಾನ್ ನೀಕೆರ್ಕ್ (2) ಅವರನ್ನು ಕಳೆದುಕೊಂಡಿತು. ನಂತರ, ಜತೆಯಾದ ಲೀ ಹಾಗೂ ಸುನ್ ಲುಸ್ ಜೋಡಿ 131 ರನ್ ಜತೆಯಾಟವಾಡಿತು. ಲೀ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಸಿದರು. ನಂತರ, 15ನೇ ಓವರ್ ನಲ್ಲಿ ಲೀ ಅವರ ವಿಕೆಟ್ ಅನ್ನು ಥಾಯ್ಲೆಂಡ್ ಪಡೆಯಿತು. ಅಂತಿಮವಾಗಿ ಆಫ್ರಿಕಾ ತಂಡ ಥಾಯ್ಲೆಂಡ್ ಗೆ 196 ರ್ ಕಠಿಣ ಗುರಿ ನೀಡಿದೆ. ಲೀ ಬಿಟ್ಟರೆ ಅದ್ಭುತ ಬ್ಯಾಟಿಂಗ್ ಮಾಡಿದ ಲುಸ್ ಅಜೇಯ 61 ರನ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


