2ನೇ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಮರ್ಮಾಘಾತ: ಇಶಾಂತ್ ಶರ್ಮಾ ಪಂದ್ಯದಿಂದ ಔಟ್
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಆಗಿದ್ದ ಇಶಾಂತ್ ಶರ್ಮಾ ಗಾಯಗೊಂಡಿದ್ದಾರೆ.

ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಆಗಿದ್ದ ಇಶಾಂತ್ ಶರ್ಮಾ ಗಾಯಗೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಹಿನ್ನಡೆ ಅನುಭವಿಸಿದೆ. ಇದರ ಮಧ್ಯೆ ಹಿರಿಯ ಅನುಭವಿ ಇಶಾಂತ್ ಶರ್ಮಾ ಗಾಯಗೊಂಡಿದ್ದು ನಾಳಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಇಶಾಂತ್ ಶರ್ಮಾ ಅವರ ಬಲ ಪಾದದ ಗಾಯಕ್ಕೆ ತುತ್ತಾಗಿದ್ದಾರೆ. ಆದ್ದರಿಂದ, ಅವರು ಕಳೆದ ಎರಡು ದಿನಗಳಿಂದ ತಂಡದೊಂದಿಗೆ ನೆಟ್ಸ್‌ನಲ್ಲಿ ಕಾಣಿಸಿಕೊಂಡರೂ ಬೌಲಿಂಗ್ ಮಾಡಿರಲಿಲ್ಲ. ಆದರೆ, ಶುಕ್ರವಾರ ಅವರು ಅಭ್ಯಾಸಕ್ಕೆ ಗೈರಾಗಿದ್ದರು. ಇಂದು ಅವರನ್ನು ವೈದ್ಯಕೀಯ ತಪಾಣೆಗೆ ಕಳುಹಿಸಿದ್ದು, ವರದಿ ಸದ್ಯದಲ್ಲೇ ಬರಲಿದೆ.
ಇನ್ನು ಇಶಾಂತ್ ಶರ್ಮಾ ಬದಲಿಗೆ ಉಮೇಶ್ ಯಾದವ್ ಅಥವಾ ಯುವ ವೇಗಿ ನವ್ ದೀಪ್ ಸೈನಿ ಅವಕಾಶವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಇಶಾಂತ್ ಶರ್ಮಾಗೆ ಮತ್ತೆ ಪಾದದ ಗಾಯ ಮರುಕಳಿಸಿದೆ ಎನ್ನಲಾಗುತ್ತಿದೆ. ಅಭ್ಯಾಸ ಸಂದರ್ಭದಲ್ಲಿ ಇಶಾಂತ್ ಕೆಲವೆ ಎಸೆತಗಳನ್ನು ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


