ಐಪಿಎಲ್ 2020: ಮಧ್ಯಾಹ್ನ ಕೇವಲ 6 ಪಂದ್ಯ, ಶನಿವಾರ ಒಂದೇ ಪಂದ್ಯ, ಭಾನುವಾರ ಮಾತ್ರ ಎರಡು
ಐಪಿಎಲ್ 2020 ಟೂರ್ನಿಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ತಿಳಿಸಿದೆ.

ಮುಂಬೈ: ಐಪಿಎಲ್ 2020 ಟೂರ್ನಿಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ತಿಳಿಸಿದೆ.
ಮಧ್ಯಾಹ್ನ ಪಂದ್ಯ 4 ಗಂಟೆಗೆ ಹಾಗೂ ರಾತ್ರಿ ಪಂದ್ಯ 8 ಗಂಟೆಗೆ ಆರಂಭವಾಗಲಿದ್ದು, ಈ ಬಾರಿ ಶನಿವಾರ ಒಂದೇ ಒಂದು ಪಂದ್ಯ ಇರುತ್ತದೆ. ಭಾನುವಾರ ಮಾತ್ರ ಎರಡು ಪಂದ್ಯಗಳು ನಡೆಯಲಿವೆ.
ಐಪಿಎಲ್ 13ನೇ ಆವೃತ್ತಿ ಮಾರ್ಚ್ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನ ಪಂದ್ಯದಲ್ಲಿ ಸೆಣಸಲಿವೆ . ಮೇ 17ರಂದು ಲೀಗ್ ಹಂತದ ಪಂದ್ಯಗಳು ಮುಗಿಯಲಿದ್ದು ಫೈನಲ್ ಪಂದ್ಯ ಮೇ 24ರಂದು ನಡಯಲಿದೆ.
ಇನ್ನು ಮಾರ್ಚ್ 31ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿ
ದಿನಾಂಕ ತಂಡ ಸಮಯ
* 31-3-2020 ಆರ್ಸಿಬಿ vs ಕೆಕೆಆರ್ ರಾತ್ರಿ 8 ಗಂಟೆಗೆ
* 7-4-2020 ಆರ್ಸಿಬಿ vs ಸನ್ರೈಸರ್ಸ್ ರಾತ್ರಿ 8 ಗಂಟೆಗೆ
* 18-4-2020 ಆರ್ಸಿಬಿ vs ಆರ್ಆರ್ ರಾತ್ರಿ 8 ಗಂಟೆಗೆ
* 22-4-2020 ಆರ್ಸಿಬಿ vs ಡೆಲ್ಲಿ ರಾತ್ರಿ 8 ಗಂಟೆಗೆ
* 3-5-2020 ಆರ್ಸಿಬಿ vs ಪಂಜಾಬ್ ಸಂಜೆ 4 ಗಂಟೆಗೆ
* 14-5-2020 ಆರ್ಸಿಬಿ vs ಚೆನ್ನೈ ರಾತ್ರಿ 8 ಗಂಟೆಗೆ
* 17-5-2020 ಆರ್ಸಿಬಿ vs ಮುಂಬೈ ರಾತ್ರಿ 8 ಗಂಟೆಗೆ
ಆರ್ಸಿಬಿ ತಂಡ ಬೇರೆ ರಾಜ್ಯಗಳಲ್ಲಿ ಆಡಲಿರುವ ಪಂದ್ಯಗಳ ವೇಳಾಪಟ್ಟಿ:
ದಿನಾಂಕ ತಂಡ ಸಮಯ
* 5-4-2020 ಆರ್ಸಿಬಿ vs ಮುಂಬೈ ಸಂಜೆ 4 ಗಂಟೆಗೆ
* 10-4-2020 ಆರ್ಸಿಬಿ vs ಡೆಲ್ಲಿ ರಾತ್ರಿ 8 ಗಂಟೆಗೆ
* 14-4-2020 ಆರ್ಸಿಬಿ vs ಪಂಜಾಬ್ ರಾತ್ರಿ 8 ಗಂಟೆಗೆ
* 25-4-2020 ಆರ್ಸಿಬಿ vs ಆರ್ಆರ್ ರಾತ್ರಿ 8 ಗಂಟೆಗೆ
* 27-5-2020 ಆರ್ಸಿಬಿ vs ಸಿಎಸ್ಕೆ ರಾತ್ರಿ 8 ಗಂಟೆಗೆ
* 5-5-2020 ಆರ್ಸಿಬಿ vs ಸನ್ರೈಸರ್ಸ್ ರಾತ್ರಿ 8 ಗಂಟೆಗೆ
* 10-5-2020 ಆರ್ಸಿಬಿ vs ಕೆಕೆಆರ್ ರಾತ್ರಿ 8 ಗಂಟೆಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


