81 ರನ್ ಕಳಪೆ ಎಂದು ಭಾವಿಸಲ್ಲ, ಟೆಸ್ಟ್ ಸರಣಿಯಲ್ಲೂ ಇದೇ ರೀತಿ ಆಡುತ್ತೇನೆ: ಮಯಾಂಕ್ ಅಗರ್ವಾಲ್
ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನವಾದ ಇಂದು ಕರ್ನಾಟಕದ ಮಯಾಂಕ್ ಅಗರ್ವಾಲ್ 99 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದರು. ಇಂದಿನ ಅವರ ಜನುಮ ದಿನದಂದೆ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.

ಹ್ಯಾಮಿಲ್ಟನ್: ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನವಾದ ಇಂದು ಕರ್ನಾಟಕದ ಮಯಾಂಕ್ ಅಗರ್ವಾಲ್ 99 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದರು. ಇಂದಿನ ಅವರ ಜನುಮ ದಿನದಂದೆ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಲಯಕ್ಕೆ ಮರಳಿರುವ ಮಯಾಂಕ್ ಅಗರ್ವಾಲ್ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ, ನನ್ನ ಬ್ಯಾಟಿಂಗ್‌ಗೆ ಅಗತ್ಯವಾದ ಕಡೆಗಳಲ್ಲಿ ಹೆಚ್ಚು ಕಾರ್ಯನಿರ್ವಹಿಸಿದ್ದೇನೆ. ಇಲ್ಲಿನ ವಾತಾವರಣದಲ್ಲಿ ಆಡುವುದು ವಿಭಿನ್ನತೆಯಿಂದ ಕೂಡಿದೆ. ಆದರೆ ಈ ಹಿಂದೆ ನಡೆದಿರುವ ಅಂಶಗಳನ್ನು ಮರೆತು ಆಡುತ್ತೇನೆ. ಅಭ್ಯಾಸ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 81 ರನ್ ಗಳಿಸಿದ್ದೇನೆ. ಟೆಸ್ಟ್ ಪಂದ್ಯದಕ್ಕೆ ಇದನ್ನು ವಿಶ್ವಾಸವಾಗಿ ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಸಹಾಯದಿಂದ ನನಗೆ ಅಗತ್ಯವಾದ ತಾಂತ್ರಿಕ ಕೌಶಲಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದೇನೆ ಎಂದು ಮಯಾಂಕ್ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


