ಐಪಿಎಲ್ 2020: ಹೀಗಿದೆ ಆರ್ ಸಿಬಿ ಹೊಸ ಲೋಗೋ!
ಐಪಿಎಲ್ 2020 ಆವೃತ್ತಿ ಮಾರ್ಚ್ 29 ರಿಂದ ಪ್ರಾರಂಭವಾಗುತ್ತಿದೆ. ಇದಕ್ಕೂ ಮುನ್ನ ಆರ್ ಸಿಬಿ ತನ್ನ ಹೊಚ್ಚ ಹೊಸ ಲೋಗೋ ಬಿಡುಗಡೆಗೊಳಿಸಿದೆ.

ಐಪಿಎಲ್ 2020 ಆವೃತ್ತಿ ಮಾರ್ಚ್ 29 ರಿಂದ ಪ್ರಾರಂಭವಾಗುತ್ತಿದೆ. ಇದಕ್ಕೂ ಮುನ್ನ ಆರ್ ಸಿಬಿ ತನ್ನ ಹೊಚ್ಚ ಹೊಸ ಲೋಗೋ ಬಿಡುಗಡೆಗೊಳಿಸಿದೆ.
ಆರ್ ಸಿಬಿ ತಂಡದ ತತ್ವಕ್ಕೆ ತಕ್ಕಂತೆ ಹೊಸ ಲೋಗೋ ವಿನ್ಯಾಸಗೊಳಿಸಲಾಗಿದೆ. ಈ ಬಗ್ಗೆ ಆರ್ ಸಿಬಿಯ ಅಧ್ಯಕ್ಷ ಸಂಜೀವ್ ಚುರಿವಾಲ ಮಾತನಾಡಿದ್ದು, ನಮ್ಮ ಲೋಗೋನಲ್ಲಿ ತಂಡದ ಆಕ್ರಮಣಕಾರಿ ಕ್ರೀಡಾ ಮನೋಭಾವ, ಕ್ರೀಡಾಭಿಮನಿಗಳನ್ನು ನಿರಂತರವಾಗಿ ರಂಜಿಸುವ ಅಂಶಗಳು ಕಾಣಸಿಗುತ್ತವೆ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2008 ರಿಂದ ಈ ವರೆಗೂ ಒಂದೇ ಒಂದು ಐಪಿಎಲ್ ನ್ನೂ ಗೆದ್ದಿಲ್ಲ. ಈ ಬಾರಿ ಐಪಿಎಲ್ ಕಪ್ ಗೆಲ್ಲುವ ವಿಶ್ವಾಸದಲ್ಲಿರುವ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯ ಹೆಸರನ್ನೂ ಬದಲಾವಣೆ ಮಾಡಿಕೊಂಡಿದ್ದು ಕೇವಲ ರಾಯಲ್ ಚಾಲೆಂಜರ್ಸ್ ಗೆ ಸೀಮಿತಗೊಳಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


