ಕ್ರಿಕೆಟ್

ವಿರಾಟ್ ಕೊಹ್ಲಿ ಕ್ಲಾಸ್ ಪ್ಲೇಯರ್, ಹೆಚ್ಚಿನ ದೌರ್ಬಲ್ಯಗಳನ್ನು ಹೊಂದಿಲ್ಲ- ಟಿಮ್ ಸೌಥಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ. ಅವರು ಅನೇಕ ದೌರ್ಬಲ್ಯಗಳನ್ನು ಹೊಂದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಲ ಅವರ ವಿಕೆಟ್ ಪಡೆದಿರುವ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಹೇಳಿದ್ದಾರೆ

ವಿರಾಟ್ ಕೊಹ್ಲಿ ಕ್ಲಾಸ್ ಪ್ಲೇಯರ್, ಹೆಚ್ಚಿನ ದೌರ್ಬಲ್ಯಗಳನ್ನು ಹೊಂದಿಲ್ಲ- ಟಿಮ್ ಸೌಥಿ
ಟಿಮ್ ಸೌಥಿ, ವಿರಾಟ್ ಕೊಹ್ಲಿ
Published On :

ಮೌಂಟ್ ಮೌಂಗನುಯಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ. ಅವರು ಅನೇಕ ದೌರ್ಬಲ್ಯಗಳನ್ನು ಹೊಂದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಲ ಅವರ ವಿಕೆಟ್ ಪಡೆದಿರುವ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಹೇಳಿದ್ದಾರೆ

ಆಕ್ಲಂಡ್ ನಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ  ಟೀಂ ಇಂಡಿಯಾ 274 ರನ್ ಬೆನ್ನಟ್ಟಿದ್ದ ಸಂದರ್ಭದಲ್ಲಿ ಕೊಹ್ಲಿ 15 ರನ್ ಗಳಿಸಿದಾಗ ಅವರಿಗೆ ಟಿಮ್ ಸೌಥಿ ಪೆವಿಲಿಯನ್ ಹಾದಿ ತೋರಿಸಿದ್ದರು.

 ಎಲ್ಲಾ ಮಾದರಿಗಳಲ್ಲಿ ಕೊಹ್ಲಿಯನ್ನು 9 ಬಾರಿಗೆ ಸೌಥಿ ಔಟ್ ಮಾಡಿದರು. ಇದು  ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಅವರನ್ನು ಹೆಚ್ಚಿನ ಬಾರಿಗೆ ಔಟ್ ಮಾಡಿದ ಬೌಲರ್ ಟಿಮ್ ಸೌಥಿಯಾಗಿದ್ದಾರೆ.

ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಕೊಹ್ಲಿಯನ್ನು 8 ಬಾರಿ ಔಟ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಮೊರ್ನ್ ಮಾರ್ಕೆಲ್, ನಾಥನ್ ಲೈಯಾನ್, ಅಡಂ ಜಂಪಾ, ಮತ್ತು ರವಿ ರಾಮ್ ಪಾಲ್ ಏಳು ಬಾರಿ ಟೀಂ ಇಂಡಿಯಾ ನಾಯಕನ ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ, ಅತ್ಯುತ್ತಮ ಆಟಗಾರರಾಗಿದ್ದಾರೆ ಮತ್ತು ಅನೇಕ ದೌರ್ಬಲ್ಯಗಳನ್ನು ಹೊಂದಿಲ್ಲ. ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯಲು  ಸ್ವಲ್ಪ ಸಹಾಯವನ್ನು ನೀಡಿತು ಎಂದು ಸೌಥಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಎದುರಾಳಿಯ ಪ್ರಮುಖ ವಿಕೆಟ್ ಪಡೆದಾಗ ಯಾವಾಗಲೂ ನನಗೆ ಸಂತೋಷವಾಗುತ್ತದೆ. ಕೊಹ್ಲಿ ಅವರೊಬ್ಬ ಉತ್ತಮ ಆಟಗಾರರಾಗಿದ್ದಾರೆ. ಗ್ರೇಟ್ ಫಾರ್ಮ್ ನಲ್ಲಿದ್ದಾರೆ. ರನ್ ಕದಿಯುವಲ್ಲಿ ಅವರ ಆಟ ಅದ್ಬುತವಾಗಿರುತ್ತದೆ.  ಅವರು ರನ್ ಕದಿಯುವುದನ್ನು ನೋಡಲು ಯಾವಾಗಲು ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದೊಂದಿಗೆ ಆಟವಾಡಲು ಯಾವಾಗಲೂ ಖುಷಿಯಾಗುತ್ತದೆ. ಟಿ-20 ಸರಣಿಯಲ್ಲಿ ಯೋಜನೆಯಂತೆ ಆಡದಿದ್ದರೂ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದೇವೆ. ಕೆಲ ಆಟಗಾರರನ್ನು ಕಳೆದುಕೊಂಡಿದ್ದರೂ ಏಕದಿನ ಕ್ರಿಕೆಟ್  ನಲ್ಲಿ ಉತ್ತಮ ರೀತಿಯಲ್ಲಿ ಆಡಿರುವುದಾಗಿ ಟಿಮ್ ಸೌಥಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.