'ಪ್ರಯೋಗ ಪರೀಕ್ಷೆ ಬೇಡ', ಎರಡನೇ ಪಂದ್ಯಕ್ಕೆ ಚಾಹಲ್, ಕುಲ್ದೀಪ್ ಇಬ್ಬರನ್ನೂ ಆಡಿಸಿ: ಹರಭಜನ್ ಸಿಂಗ್
ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.

ಆಕ್ಲೆಂಡ್: ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ಕಳೆದ ಬುಧವಾರ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 348 ರನ್ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್ ತಂಡ ರಾಸ್ ಟೇಲರ್ ಶತಕದ ನೆರವಿನಿಂದ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಸೋಲಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
ಅಂದಿನ ಪಂದ್ಯದಲ್ಲಿ ಯಜ್ವೇಂದ್ರ ಚಾಹಲ್ ಕಣಕ್ಕೆ ಇಳಿದಿರಲಿಲ್ಲ. ಕುಲ್ದಿಪ್ ಎರಡು ವಿಕೆಟ್ ಪಡೆದಿದ್ದರು. ಆದರೆ, 84 ರನ್ ಬಿಟ್ಟುಕೊಟ್ಟಿದ್ದರು. ಭಾರತದ ಬೌಲರ್‌ಗಳ ಪೈಕಿ ಕುಲ್ದೀಪ್ ಅತ್ಯಂತ ದುಬಾರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


