ಖ್ಯಾತ ಕ್ರಿಕೆಟ್ ಪತ್ರಕರ್ತ, ಗೀತರಚನೆಗಾರ ರಾಜು ಭರತನ್ ನಿಧನ
ಹಿರಿಯ ಕ್ರಿಕೆಟ್ ಪತ್ರಕರ್ತ ಮತ್ತು ಚಲನಚಿತ್ರ ಗೀತೆರಚನೆಗಾರ ರಾಜು ಭರತನ್ (86)ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಭರತನ್ ಮುಂಬೈನಲ್ಲಿ ಧನರಾದರು ಎಂದು ಮೂಲಗಳು ಖಚಿತಪಡಿಸಿವೆ.

ಹಿರಿಯ ಕ್ರಿಕೆಟ್ ಪತ್ರಕರ್ತ ಮತ್ತು ಚಲನಚಿತ್ರ ಗೀತೆರಚನೆಗಾರ ರಾಜು ಭರತನ್ (86)ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಭರತನ್ ಮುಂಬೈನಲ್ಲಿ ಧನರಾದರು ಎಂದು ಮೂಲಗಳು ಖಚಿತಪಡಿಸಿವೆ.
ಮೃತರು ಮಗಳು, ಸೊಸೆ ಹಾಗೂ ಮೊಮ್ಮಕ್ಕಳು, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಭರತನ್ "ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ" ದಲ್ಲಿ 42 ವರ್ಷಗಳ ಸೇವೆ ಸಲ್ಲಿಸಿದ್ದರು.
ಭರತನ್ "ದಿ ವಿಕ್ಟರಿ ಸ್ಟೋರಿ" (1974) ಎನ್ನುವ ಪ್ರಥಮ ಪೂರ್ಣ ಪ್ರಮಾಣದ ಕ್ರಿಕೆಟ್ ಡಾಕ್ಯುಮೆಂಟರಿಯನ್ನು ಸೃಷ್ಟಿಸಿದ್ದರು.
"ರೈವಲ್ಸ್ ಇನ್ ಥ ಸನ್: ಎ ಸರ್ವೆ ಆಫ್ ದಿ 1952 ಟೂರ್ ಆಫ್ ಇಂಗ್ಲೆಂಡ್" (), " "ಇಂಡಿಯನ್ ಕ್ರಿಕೆಟ್ - ದಿ ವಿಟಲ್ ಫೇಸ್"" (1977) ಸೇರಿದಂತೆ ಆರು ಪುಸ್ತಕಗಳನ್ನು ಪ್ರಕಟಿಸಿದ್ದ ಭರತನ್ ಪ್ರಸಿದ್ದ ಗಾಯಕರಾದ ಲತಾ ಮಂಗೇಶ್ಕರ್, ಆಶಾ ಭೋಸ್ಲೆ ಮತ್ತು ಖ್ಯಾತ ಸಂಗೀತ ನಿರ್ದೇಶಕ ನೌಶಾದ್ ಅವರ ಜೀವನ ಚರಿತ್ರೆಗಳನ್ನು ಸಹ ಬರೆದಿದ್ದರು.
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ, ಭರತನ್ ಅವರ ನಿಧನದ ಬಗೆಗೆ ಹೇಳಿದ್ದು "ಇಲ್ಲಸ್ಟ್ರೇಟೆಡ್ ವೀಕ್ಲಿಯ ರಾಜು ಭಾರತನ್ ಇನ್ನಿಲ್ಲ. ಅವರು ಕ್ರಿಕೆಟ್ ಹಾಗೂ ಸಿನಿಮಾಗಳ ಬಗ್ಗೆ ಸಮಾನ ಗೌರವ ಹಾಗೂ ಬದ್ದತೆ ಹೊಂದಿದ್ದರು" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


