2ನೇ ಟೆಸ್ಟ್: 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಆಸ್ಟ್ರೇಲಿಯಾ ತಂಡ
ಮೊದಲನೇ ಟೆಸ್ಟ್ ನಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಈಗ ಎರಡನೇ ಟೆಸ್ಟ್ ನಲ್ಲಿ ಎಡವಿದೆ.

ಮೆಲ್ಬೋರ್ನ್ ಮೊದಲನೇ ಟೆಸ್ಟ್ ನಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಈಗ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ಎಡವಿದೆ.
ಡಿ.26 ರಂದು ಆರಂಭವಾಗಿರುವ ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಅಶ್ವಿನ್ ಹಾಗೂ ಬುಮ್ರಾ ಮಾರಕ ಬೌಲಿಂಗ್ ನಿಂದಾಗಿ ಆಸ್ಟ್ರೇಲಿಯಾ 162 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಆರಂಭಿಕ ಆಟಗಾರ ಜೋ ಬರ್ನ್ಸ್ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿದ್ದು ಆಸ್ಟ್ರೇಲಿಯಾಗೆ ಆಘಾತ ನೀಡಿತ್ತು. ಈ ಬಳಿಕ ಕ್ರೀಸ್ ಗೆ ಬಂದ ಮ್ಯಾಥ್ಯೂ ವೇಡ್ ತಂಡಕ್ಕೆ ಚೇತರಿಕೆಯಾಗುವಂತೆಹ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆದರೆ ದೊಡ್ಡ ಹೊಡೆತಕ್ಕೆ ಮುಂದಾಗಿ ಗುರಿಗೆ ಸರಿಯಾಗಿ ಸಿಗದ ಚೆಂಡು 30 ಯಾರ್ಡ್ ಸರ್ಕಲ್ ನ್ನು ದಾಟಲಿಲ್ಲ, ಈ ಹಂತದಲ್ಲಿ ಜಡೇಜಾ ಕ್ಯಾಚ್ ಹಿಡಿದು, ವೇಡ್ ನ್ನು 30 ರನ್ ಗಳಿಗೆ ಪೆವಿಲಿಯನ್ ನತ್ತ ನಡೆಯುವಂತೆ ಮಾಡಿದರು.
4ನೇ ವಿಕೆಟ್‌ಗೆ ಉತ್ತಮ ಜೊತೆಯಾಟ ಆಡಿದ ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ 86 ರನ್ ಕಲೆ ಹಾಕಿದ್ದ ಈ ಜೋಡಿಯ ಜೊತೆಯಾಟ ಟ್ರಾವಿಸ್ ಹೆಡ್ (38 ರನ್) ಔಟ್ ಆಗುವ ಮೂಲಕ ಮುರಿಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


