ಚಹಾಲ್‌ರನ್ನು ಜಡೇಜಾಗೆ ಸಬ್‍ಸ್ಟ್ಯೂಟ್ ಆಡಿಸಿದ್ದಕ್ಕೆ ಹೌಹಾರಿದ ಜಸ್ಟಿನ್ ಲ್ಯಾಂಗರ್, ವಿಡಿಯೋ ವೈರಲ್!
ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಪಾತ್ರವಹಿಸಿದ್ದು ಜಡೇಜಾಗೆ ಸಬ್‍ಸ್ಟ್ಯೂಟ್ ಆಗಿ ಆಡಿದ್ದ ಯಜುವೇಂದ್ರ ಚಹಾಲ್, ಇನ್ನು ಚಹಾಲ್ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೌಹಾರಿರುವ ವಿಡಿಯೋ ವೈರಲ್ ಆಗಿದೆ.

ಕ್ಯಾನ್ ಬೆರಾ: ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಪಾತ್ರವಹಿಸಿದ್ದು ಜಡೇಜಾಗೆ ಸಬ್‍ಸ್ಟ್ಯೂಟ್ ಆಗಿ ಆಡಿದ್ದ ಯಜುವೇಂದ್ರ ಚಹಾಲ್, ಇನ್ನು ಚಹಾಲ್ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೌಹಾರಿರುವ ವಿಡಿಯೋ ವೈರಲ್ ಆಗಿದೆ.
ಮೊದಲ ಟಿ20 ಪಂದ್ಯದಲ್ಲಿ ಆಡಿದ್ದ ರವೀಂದ್ರ ಜಡೇಜಾ ಅವರು ಅದ್ಭುತ ಬ್ಯಾಟಿಂಗ್ ಮಾಡಿ 23 ಎಸೆತಗಳಲ್ಲಿ 44 ರನ್ ಪೇರಿಸಿದ್ದರು. ಕೊನೆಯ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಬೌನ್ಸರ್ ನಿಂದ ಜಡೇಜಾ ಗಾಯಗೊಂಡರು. ಹೀಗಾಗಿ ಅವರ ಬದಲಿಗೆ ಸಬ್‍ಸ್ಟ್ಯೂಟ್ ಆಗಿ ಯಜುವೇಂದ್ರ ಚಹಾಲ್ ರನ್ನು ಆಡಿಸಲಾಯಿತು.
ಇನ್ನು ಯಜುವೇಂದ್ರ ಚಹಾಲ್ ಬೌಲಿಂಗ್ ಮಾಡಿದ್ದು ಆರೋನ್ ಫಿಂಚ್ ಮತ್ತು ಶಾರ್ಟ್ ಅದ್ಭುತವಾಗಿ ಜೊತೆಯಾಟವಾಡುತ್ತಿದ್ದು ಫಿಂಚ್ ರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾಗೆ ಚಹಾಲ್ ಮೊದಲ ಆಘಾತ ನೀಡಿದರು. ಈ ವೇಳೆ ಜಸ್ಟಿನ್ ಲ್ಯಾಂಗರ್ ರೆಫ್ರಿ ಡೇವಿಡ್ ಬೂನ್ ವಿರುದ್ಧ ಹೌಹಾರಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. 162 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಪೇರಿಸಿದ್ದು 11 ರನ್ ಗಳಿಂದ ಭಾರತಕ್ಕೆ ಶರಣಾಗಿದೆ.
Related Article
ಟೀಂ ಇಂಡಿಯಾ ಗೆಲುವಿಗೆ ಕಾರಣವಾದ 'ಕನ್ಕ್ಯುಶನ್ ಸಬ್‍ಸ್ಟ್ಯೂಟ್' ಅಂದರೇನು?
ಜಡೇಜಾ ಬದಲಿಗೆ ಸಬ್‍ಸ್ಟ್ಯೂಟ್ ಆಡಿದ್ದ ಚಹಾಲ್ ಕಮಾಲ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಗೆದ್ದ ಟೀಂ ಇಂಡಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


